Select Your Language

Notifications

webdunia
webdunia
webdunia
Sunday, 13 April 2025
webdunia

ಮನೆ ಬಾಡಿಗೆಗೆ ಪೊಲೀಸ್ ಅನುಮತಿ ಕಡ್ಡಾಯ

Police permission is mandatory for house rent
ಮಂಗಳೂರು , ಶನಿವಾರ, 26 ನವೆಂಬರ್ 2022 (19:21 IST)
ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟ ಪ್ರಕರಣ ರಾಜ್ಯದ್ಯಾಂತ ಸಂಚಲನ ಸೃಷ್ಟಿಸಿದೆ. ಉಗ್ರ ಶಾರೀಕ್​​​​ ನಕಲಿ ದಾಖಲೆ ನೀಡಿ, ಮನೆ ಬಾಡಿಗೆಗೆ ಪಡೆದಿದ್ದನು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ನಗರ ಪೊಲೀಸರು ನೂತನ ನಿಯಮ ಜಾರಿ ಮಾಡಿದ್ದಾರೆ. ಮನೆ ಮಾಲೀಕರು ಮನೆ ಬಾಡಿಗೆ ಕೊಡುವ ಮೊದಲು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕಡ್ಡಾಯವಾಗಿ ಪಡೆಯಬೇಕು. ಮೈಸೂರು ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಈ ಸೂಚನೆಯನ್ನು ನೀಡಿದ್ದಾರೆ. 100 ರೂಪಾಯಿ ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಪಡೆಯಬೇಕು. ಬ್ಯಾಚುಲರ್‌, ಕುಟುಂಬಗಳಿಗೆ ಹಾಗೂ PG ನಡೆಸುವವರಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಬಾಡಿಗೆ ಇರುವವರು ಸಹ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಠಾಣೆಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸೂಚನೆ ಕೊಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ರರಣ ಮುಕ್ತ ತನಿಖೆ ಮಾಡಲು ಸರ್ಕಾರ ಸಿದ್ದವಾಗಿದೆ- ಸಿಎಂ