Publish Date: Thu, 18 May 2023 (13:27 IST)
Updated Date: Thu, 18 May 2023 (12:30 IST)
ಸಿದ್ದರಾಮಯ್ಯ ನಿವಾಸಕ್ಕೆ ಫುಲ್ ಟೈಟ್ ಸೆಕ್ಯೂರಿಟಿಯನ್ನ ಪೊಲೀಸರು ಅಳವಡಿಸಿದ್ದಾರೆ.ಶಿವಾನಂದವೃತ್ತದ ಬಳಿ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಅಭಿಮಾನಿಗಳ ದಂಡು ಆಗಮಿಸುತ್ತಿರುವ ಹಿನ್ನೆಲೆ ಟೈಟ್ ಸೆಕ್ಯೂರಿಟಿ ಮಾಡಿದ್ದು, ಸಿದ್ದರಾಮಯ್ಯ ನಿವಾಸ ಎರೆಡೂ ಬದಿ ರಸ್ತೆಯನ್ನ ಪೊಲೀಸರು ಬಂದ್ ಮಾಡಿದ್ದಾರೆ.
ತಪಾಸಣೆ ಮಾಡಿ ವಾಹನಗಳನ್ನು ಖಾಕಿ ಪಡೆ ಬೀಡುತ್ತಿದ್ದು,ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರನ್ನು ಖಾಕಿಪಡೆ ತಪಾಸಣೆ ಮಾಡುತ್ತಿದೆ.ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಕಾರ್ಯಕರ್ತರು ಬೆಂಬಲಿಗರು ದೌಡಯಿಸುತ್ತಿದ್ದು,ಈ ಹಿನ್ನೆಲೆ ಸಿದ್ದರಾಮಯ್ಯ ನಿವಾಸದ ಮುಂದೆ ಬ್ಯಾರಿಕೆಡ್ ಅಳವಡಿಕೆ ಮಾಡಲಾಗಿದೆ.ಅಲ್ಲದೇ ಸಿದ್ದರಾಮಯ್ಯ ನಿವಾಸದ ನಾಮಪಾಲಕ್ಕಕ್ಕೆ ಮಲ್ಲಿಗೆ ಅಭಿಮಾನಿಗಳು ಹಾಕ್ತಿದ್ದು,ಸಿದ್ದರಾಮಯ್ಯ ಮನೆ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.