ಬೆಂಗಳೂರಲ್ಲಿ ಕ್ರೈಂ ಆಕ್ಟಿವಿಟಿ ಹಾಗೂ ಗಾಂಜಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದಾರೆ.ಪೂರ್ವ ವಿಭಾಗದ ಪೊಲೀಸರಿಂದ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.ರೌಡಿಗಳ ಮನೆಯನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಹಲಸೂರು, ಕೆ.ಜಿ ಹಳ್ಳಿ,ಡಿಜೆಹಳ್ಳಿ ಸೇರಿದಂತೆ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.ಮನೆಯಲ್ಲಿ ಮಾರಕಾಸ್ತ್ರ ಅಥಾವ ಗಾಂಜಾ ಪತ್ತೆಯಾಗುವ ಸಾಧ್ಯತೆ ಇದೆ.ಚುನಾವಣಾ ಸಂಧರ್ಭದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿರುವ ರೌಡಿಗಳಿಗೆ ಮತ್ತೆ ಎಚ್ಚರಿಕೆ ಕೊಡುವ ಸಲುವಾಗಿ ಪೊಲೀಸರು ಪರಿಶೀಲನೆ ನಡೆಸಿ ದಾಳಿ ಮಾಡಿದ್ದಾರೆ.ರೌಡಿ ಆಕ್ಟಿವಿಟಿಗಳಲ್ಲಿ ಭಾಗಿಯಾಗದಂತೆಯೂ ಎಚ್ಚರಿಕೆ ನೀಡಲಾಗಿದೆ.ಅಗ್ನೇಯ ವಿಭಾಗದಲ್ಲೂ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿದ್ದು,ಕೋರಮಂಗಲ, ಮಡಿವಾಳ, ಅಡುಗೋಡಿ, ಮೈಕೋ ಲೇಔಟ್ ಸೇರಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡಡಸಲಾಗಿದೆ.