Select Your Language

Notifications

webdunia
webdunia
webdunia
webdunia

ಬಿಜೆಪಿ ಅಡಳಿತದಲ್ಲಿ ಪೊಲೀಸರಿಗೆ ಸಮಸ್ಯೆಗಳಿರಲಿಲ್ಲವೇ: ಉಗ್ರಪ್ಪ

ಬಿಜೆಪಿ
ಕೊಪ್ಪಳ , ಬುಧವಾರ, 1 ಜೂನ್ 2016 (15:08 IST)
ಬಿಜೆಪಿ ಅಡಳಿತದಲ್ಲಿ ಪೊಲೀಸರಿಗೆ ಸಮಸ್ಯೆಗಳಿರಲಿಲ್ಲವೇ,ದಯಮಾಡಿ ಬೇರೆಯವರ ಪ್ರೇರಣೆಯಿಂದ ಮುಷ್ಕರಕ್ಕೆ ಮುಂದಾಗಬೇಡಿ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮನವಿ ಮಾಡಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ,ಸರಕಾರ ಪೊಲೀಸರ ಬೇಡಿಕೆ ಈಡೇರಿಸಲು ಬದ್ಧವಾಗಿದೆ. ಮಾತುಕತೆಯಿಂದ ಬೇಡಿಕೆಗಳ ಈಡೇರಿಕೆ ಸಾಧ್ಯವಿರುವುದರಿಂದ ಮಾತುಕತೆಗೆ ಬನ್ನಿ ಎಂದು ಕರೆ ನೀಡಿದ್ದಾರೆ.
 
ಪೊಲೀಸ್ ಇಲಾಖೆ ಶಿಸ್ತು ಬದ್ಧ ಇಲಾಖೆಯಾಗಿದೆ. ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆಯ ಘನತೆ ಗೌರವಕ್ಕೆ ಕುಂದು ತರಬೇಡಿ ಎಂದು  ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದ್ದಾರೆ.
  
ಸುಪ್ರೀಂಕೋರ್ಟ್ ಆದೇಶದಂತೆ ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ. ವಿಪಕ್ಷಗಳು ಅನಗತ್ಯವಾಗಿ ಪ್ರಚಾರ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪರೋಕ್ಷವಾಗಿ ಒತ್ತಡ ಹೇರುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌ಪಿ ಸಂಸ್ಥೆಯಿಂದ ವಿಶ್ವದ ಅತಿ ತೆಳುವಾದ ಲ್ಯಾಪ್‌ಟಾಪ್ ಮಾಡೆಲ್ ಮಾರುಕಟ್ಟೆಗೆ