Publish Date: Mon, 08 May 2017 (14:49 IST)
Updated Date: Mon, 08 May 2017 (14:51 IST)
ರೌಡಿಶೀಟರ್ ನಾಗನ ಮನೆಯ ಮೇಲಿನ ದಾಳಿ ಪ್ರಕರಣ ಕುರಿತಂತೆ ನಾಗನ ಮತ್ತೊಬ್ಬ ಸಹಚರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಂದು ಎಸಿಪಿ ರವಿಕುಮಾರ್ ನೇತೃತ್ವದ ವಿಶೇಷ ಪೊಲೀಸ ತಂಡ ವಿವೇಕನಗರದಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿ ನಾಗನ ಸಹಚರ ಚೆನ್ನೈ ಹರಿಕೃಷ್ಣ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದೆ.
ನಾಗ ಸಹಚರ ಹರಿಕೃಷ್ಣ ತಮಿಳುನಾಡಿನ ವೆಲ್ಲೂರಿನಿಂದ ಬೆಂಗಳೂರಿಗೆ ಬಂದಿರುವ ಸುಳಿವು ಪಡೆದು ದಾಳಿ ಮಾಡಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದುವರಿಗೆ ನಾಗನ 8 ಸಹಚರರನ್ನು ವಶಕ್ಕೆ ಪಡೆಯಲಾಗಿದೆ.
ನ್ಯಾಯಾಲಯದಲ್ಲಿ ಪದೇ ಪದೇ ಜಾಮೀನು ಅರ್ಜಿ ತಿರಸ್ಕ್ರತವಾಗುತ್ತಿರುವ ಹಿನ್ನೆಲೆಯಲ್ಲಿ ನಾಗ, ಶರಣಾಗತಿಯ ಬಗ್ಗೆ ಯೋಚಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.