Publish Date: Mon, 15 May 2017 (12:22 IST)
Updated Date: Mon, 15 May 2017 (12:24 IST)
ಹಳೇನೋಟು ಬದಲಾವಣೆ ಮಾಡುತ್ತಿದ್ದ 10 ಜನರನ್ನು ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳು ಎನ್‌ಆರ್‌ಐಯೊಬ್ಬನನ್ನು ಕರೆಸಿಕೊಂಡು ಅವರ ಮೂಲಕ ಸುಮಾರು 3.5 ಕೋಟಿ ರೂಪಾಯಿಗಳ ಹಳೇ ನೋಟುಗಳ ಬದಲಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಸವನಗುಡಿ ಪೊಲೀಸರಿಗೆ ಹಳೇ ನೋಟು ಬದಲಾವಣೆ ಮಾಡುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ದಾಳಿ ಮಾಡಿ 10 ಮಂದಿ ಆರೋಪಿಗಳು ಮತ್ತು 3.5 ಕೋಟಿ ರೂಪಾಯಿಗಳ ಹಳೇ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.