Publish Date: Sun, 11 Dec 2016 (11:10 IST)
Updated Date: Sun, 11 Dec 2016 (11:14 IST)
ಕುಲಬರ್ಗಿ: ಕೊನೆಗೂ ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಬಂಧನಾಗಿದೆ. ಕುಲಬರ್ಗಿಯಲ್ಲಿ ಭೀಮಾ ನಾಯಕ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಗಣಿ ಧಣಿ ಜನಾರ್ಧನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ವೈಟ್ ಮಾಡುವ ದಂಧೆಗೆ ರೆಡ್ಡಿಗೆ ಸಹಾಯ ಮಾಡಿದ್ದಾರೆಂದು ಅವರ ಕಾರು ಚಾಲಕ ರಮೇಶ್ ಡೆತ್ ನೋಟ್ ನಲ್ಲಿ ಬರೆದಿದ್ದರು. ಈ ಹಿನ್ನಲೆಯಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಭೀಮಾನಾಯ್ಕ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಈ ಹಿನ್ನಲೆಯಲ್ಲಿ ಅಧಿಕಾರಿ ಕುಲಬರ್ಗಿಯಲ್ಲಿದ್ದಾರೆಂದು ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ