Publish Date: Fri, 13 Nov 2026 (14:11 IST)
Updated Date: Fri, 13 Nov 2026 (14:16 IST)
ಬೆಂಗಳೂರು: ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿ ಜೊತೆ ಸಿಎಂ ಡಿಕೆ ಶಿವಕುಮಾರ್ ರಾಜಕೀಯ ವೈರುದ್ಧ್ಯ ಮರೆತು ಫುಲ್ ತಮಾಷೆ, ನಗು ನಗುತ್ತಾ ಕಾಲ ಕಳೆದಿದ್ದು ಎಲ್ಲರ ಗಮನ ಸೆಳೆದಿದೆ.
ನಿನ್ನೆಯಿಡೀ ಮೆಟ್ರೋ ನಿರ್ಮಾಣ, ನಿರ್ವಹಣೆ ಖರ್ಚು ವಿಚಾರವಾಗಿ ನಾವು ಮಾಡಿದ್ದು ನಮ್ಮ ಖರ್ಚು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಕಿತ್ತಾಡಿದ್ದೇ ಕಿತ್ತಾಡಿದ್ದು. ನಗರದಲ್ಲಿ ಪೋಸ್ಟರ್ ಅಂಟಿಸುವ ವಿಚಾರಕ್ಕೂ ಪೈಪೋಟಿ ನಡೆಸಿದ್ದರು.
ಆದರೆ ಇಂದು ಪ್ರಧಾನಿ ಮೋದಿ ಕರ್ನಾಟಕದ ನೆಲಕ್ಕೆ ಬಂದಿಳಿಯುತ್ತಿದ್ದಂತೇ ಸ್ವತಃ ಸಿಎಂ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ತೆರಳಿ ಗೌರವಯುತವಾಗಿ, ನಗು ನಗುತ್ತಾ ಮೋದಿಯವರನ್ನು ಬರಮಾಡಿಕೊಂಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಮುನ್ನ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಪರಸ್ಪರ ನಗುತ್ತಾ, ಹರಟುತ್ತಾ, ತಮಾಷೆ ಮಾಡಿಕೊಂಡು ಸ್ನೇಹದಿಂದ ನಡೆದುಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಮುನ್ನ ಪ್ರಧಾನಿ ಮೋದಿ, ಸಿಎಂ ಡಿಕೆ ಶಿವಕುಮಾರ್ ಸ್ವತಃ ತಾವೇ ಟಿಕೆಟ್ ಕೌಂಟರ್ ಗೆ ಬಂದು ಟಿಕೆಟ್ ಖರೀದಿ ಮಾಡಿದ್ದಾರೆ. ಈ ವೇಳೆ ಸಚಿವ ಕೃಷ್ಣ ಭೈರೇಗೌಡ, ಸಂಸದ ತೇಜಸ್ವಿ ಸೂರ್ಯ ಕೂಡಾ ಜೊತೆಗಿದ್ದರು. ರಾಜಕೀಯವಾಗಿ ಏನೇ ವಿರೋಧಗಳಿರಲಿ, ಪ್ರಧಾನಿ ಮೋದಿ ಮತ್ತು ಡಿಕೆಶಿ ಬಾಂಧವ್ಯ ಕಾಪಾಡಿಕೊಂಡಿದ್ದು ಎದ್ದು ಕಾಣುತ್ತಿತ್ತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ