Select Your Language

Notifications

webdunia
webdunia
webdunia
webdunia

ಧರ್ಮದ ವಿಚಾರದಲ್ಲಿ ಹುಡುಗಾಟ ಸಹಿಸಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ಧರ್ಮಸ್ಥಳ ಹಲವು ಶವ ಹೂತಿಟ್ಟ ಪ್ರಕರಣ

Sampriya

ಬೆಂಗಳೂರು , ಬುಧವಾರ, 3 ಸೆಪ್ಟಂಬರ್ 2025 (19:14 IST)
Photo Credit X
ಬೆಂಗಳೂರು: ಧರ್ಮಸ್ಥಳ ಚಲೋ ಮೆರವಣಿಗೆಯಲ್ಲಿ ತೆರಳುತ್ತಿದ್ದ ನಮ್ಮ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ವಿಡಿಯೋ ಸೆರೆಹಿಡಿದು ಹಾನಿಕಾರಕ ಕಂಟೆಂಟ್ ಹಾಕಿದ್ದಾರೆ. ಇದನ್ನು ತಡೆಯಲು ಸರಕಾರ, ಗೃಹ ಇಲಾಖೆ ಕ್ರಮ ವಹಿಸಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸೌಜನ್ಯ ವಿಚಾರದಲ್ಲಿ ಯಾವುದೇ ಒಪ್ಪಂದದ ನಡೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಸೌಜನ್ಯರ ತಾಯಿ ಇಟ್ಟಿರುವ ಬೇಡಿಕೆಯ ಪರವಾಗಿ ಇರುವುದಾಗಿ ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅವರ ಮನೆಗೂ ಭೇಟಿ ಕೊಟ್ಟಿದ್ದಾರೆ ಎಂದರು. ಧರ್ಮದ ವಿಚಾರದಲ್ಲಿ ಇಂಥ ಹುಡುಗಾಟ ಮಾಡಿದರೆ, ನಾವು ಸಹಿಸುವುದಿಲ್ಲ ಎಂದರು. 

ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಪೋಸ್ಟ್ ಬಂದಾಗ ತಕ್ಷಣ ಬಂಧಿಸುತ್ತಾರೆ. ಸಂಬಂಧಿತ ವ್ಯಕ್ತಿಯ ಮೇಲೆ ಕೂಡಲೇ ಕೇಸ್ ದಾಖಲಿಸಬೇಕು. ಸೋಷಿಯಲ್ ಮೀಡಿಯ ಕಂಟೆಂಟನ್ನು ತೆಗೆಸಿಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನ್ಯಾಯಬದ್ಧವಾಗಿ ಹೋರಾಟ ಮಾಡಿದೆ. ಧರ್ಮರಕ್ಷಣೆಗಾಗಿ ಹೋರಾಟ ಮಾಡಿರುವುದು ದೇಶ, ರಾಜ್ಯದ ನಾನಾ ಭಾಗದ ಪ್ರತಿಯೊಬ್ಬ ಕಾರ್ಯಕರ್ತರು ಹಿಂದೂ ಸಮಾಜವನ್ನು ಕಾಪಾಡಬೇಕು; ಹಿಂದೂ ಸಮಾಜಕ್ಕೆ ಆತಂಕ ಬಂದಾಗ ಅಥವಾ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಗೆ ಯಾರೇ ಅಗೌರವ ತರಲು ಯಾರೇ ಪ್ರಯತ್ನ ಮಾಡಿದರೂ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಷಡ್ಯಂತ್ರ ವಿರೋಧಿಸಿ ಮತ್ತು ಸರಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ನಾವು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೆವು ಎಂದು ವಿವರಿಸಿದರು. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ, ನಮ್ಮ ನಾಯಕರು, ಬಿಜೆಪಿ ಚುನಾಯಿತ ಪ್ರತಿನಿಧಿಗಳ ವಿಡಿಯೋ ಮಾಡಿ ಆಪಾದನೆ ಮಾಡಿದ್ದಾರೆ. ಈ ಕಂಟೆಂಟ್ ಹಾಕಿದ ವ್ಯಕ್ತಿಯ ಮೇಲೆ ಕೇಸು ದಾಖಲಿಸಬೇಕು ಮತ್ತು ಆ ಕಂಟೆಂಟನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್ ಅಶ್ವತ್ಥನಾರಾಯಣ, ರಾಜ್ಯ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳಾ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ, ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ ಮತ್ತು ವಕೀಲರ ತಂಡದವರು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ವಕ್ತಾರ ಪವನ್ ಖೇರಾ ಪತ್ನಿಯಲ್ಲಿ ಎರಡು ವೋಟರ್ ಐಡಿ: ಬಿಜೆಪಿ ಆರೋಪ