Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊಸ ಲುಕ್ ನೀಡಲು ಪ್ಲಾನ್‌

Bengaluru Chinnaswamy Stadium
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊಸ ಲುಕ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು.

ಈ ಸಂಬಂಧ ಮಾತನಾಡಿದ ಅವರು, ಕ್ರೀಡಾಂಗಣದಲ್ಲಿ ಮತ್ತಷ್ಟು ಹೈಟೆಕ್ ಯೋಜನೆ ರೂಪಿಸಿ, ಎಲ್‌ಇಡಿ ದೀಪಗಳನ್ನು ಅಳವಡಿಸುವುದಾಗಿ ಹೇಳಿದರು. 

ಈಗಾಗಲೇ ಮೈಸೂರು ಹಾಗೂ ಹುಬ್ಬಳ್ಳಿ ಕ್ರೀಡಾಂಗಣಗಳಲ್ಲೂ ಎಲ್‌ಇಡಿ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ಕ್ರೀಡಾಂಗಣದಲ್ಲಿ 33 ಸಾವಿರ ಆಸನಗಳಿದ್ದರೂ, ಸುಮಾರು 26 ಸಾವಿರ ಪ್ರೇಕ್ಷಕರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ. ಇದನ್ನು 55 ಸಾವಿರದಿಂದ 60 ಸಾವಿರ ಆಸನಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಯೋಜನೆ ಸಿದ್ಧವಾಗುತ್ತಿದೆ ಎಂದು ಹೇಳಿದರು.

ಇನ್ನೂ ವಿಶ್ವದ ವಿವಿಧ ಭಾಗಗಳಿಂದ 28ಆರ್ಕಿಟೆಕ್ಚರ್‌ ಸಂಸ್ಥೆಗಳು ಮುಂದೆ ಬಂದಿದೆ.  ಅತ್ಯುತ್ತಮ ಸಂಸ್ಥೆಗಳೊಂದಿಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ವೆಂಕಟೇಶ್ ಪ್ರಸಾದ್ ಮಾಹಿತಿ ಹಂಚಿಕೊಂಡರು. 


Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಐಆರ್‌ ಮೂಲಕ ಬಡವರ ಮತ ತೆಗೆಯಲು ಸಂಚು: ಡಿಕೆ ಶಿವಕುಮಾರ್