Webdunia - Bharat's app for daily news and videos

Install App

ಅನಗತ್ಯ ಖರ್ಚು ವೆಚ್ಚ ನಿರ್ಬಂಧಿಸಲು ಯೋಚನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Webdunia
ಮಂಗಳವಾರ, 7 ಸೆಪ್ಟಂಬರ್ 2021 (19:12 IST)
ಬೆಂಗಳೂರು: ಅನಗತ್ಯ ಖರ್ಚು ವೆಚ್ಚ ನಿರ್ಬಂಧಿಸಲು ಯೋಚನೆ ಮಾಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ದೂರಗಾಮಿ ಯೋಜನೆಗಳನ್ನು ಜಾರಿಗೊಳಿಸಿ ಕಟ್ಟಕಡೆಯ ಬಡವರಿಗೆ ಮೂಲಭೂತ ಸೌಕರ್ಯ ಮತ್ತು ಬದುಕನ್ನು ಕಟ್ಟಿ ಕೊಡುವುದು, ಅವರ ಮಕ್ಕಳಿಗೆ ಶಿಕ್ಷಣ ಕೊಡುವುದು, ಅಸ್ಪøಶ್ಯತೆ ನಿವಾರಿಸುವುದು, ಸಮಾಜದ ಮುಖ್ಯವಾಹಿನಿಗೆ ಅವರನ್ನು ತರುವುದು ನನ್ನ ಮತ್ತು ನಮ್ಮ ಸರಕಾರದ ಗುರಿ ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲಾಗುವುದು. ಪರಿಶಿಷ್ಟ ಜಾತಿಯ ಶಾಸಕರ ಸಭೆ ಕರೆದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಲಾಖೆಯ ಅಗತ್ಯಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಾತಿ ಜನಗಣತಿ ನಡೆದಿತ್ತು. 200 ಕೋಟಿ ಬಿಡುಗಡೆ ಮಾಡಿ, 162 ಕೋಟಿ ರೂಪಾಯಿ ಖರ್ಚು ಮಾಡಿ, ಕಾಂತರಾಜ ಆಯೋಗದಿಂದ ಜಾತಿ ಜನಗಣತಿ ನಡೆಸಲಾಗಿತ್ತು. ಅವರ ಅವಧಿಯಲ್ಲಿ ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ ಎಂಬುದು ನನಗೆ ತಿಳಿಯದು. ಸಿದ್ದರಾಮಯ್ಯ ಅವರೇ ತಿಳಿಸಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಸ್ತುತ ಶ್ರೀ ಜಯಪ್ರಕಾಶ್ ಹೆಗ್ಡೆ ಅವರನ್ನು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರನ್ನಾಗಿ ಶ್ರೀ ಯಡಿಯೂರಪ್ಪ ಅವರ ಸರಕಾರ ನೇಮಿಸಿದೆ. ಜಾತಿ ಜನಗಣತಿಗೆ ಸದಸ್ಯ ಕಾರ್ಯದರ್ಶಿಯ ಸಹಿಯೇ ಇಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಗಣತಿ ವರದಿಯ ಅಧಿಕೃತತೆ ಬಗ್ಗೆ ಪರಿಶೀಲಿಸಲು ಸಮಯ ಬೇಕೆಂದೂ ಅವರು ತಿಳಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಪರಿಶೀಲಿಸಿ ಮಂಡಿಸಿದ ಬಳಿಕ ಸಚಿವ ಸಂಪುಟವು ಆ ಕುರಿತು ತೀರ್ಮಾನಿಸಲಿದೆ ಎಂದು ತಿಳಿಸಿದರು. ನಮ್ಮಲ್ಲೇನೂ ಗೊಂದಲ ಇಲ್ಲ. ಹಿಂದೆ ಗೊಂದಲ ಆದುದಕ್ಕೆ ನಾವು ಕಾರಣರಲ್ಲ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸುಮಾರು 1.27 ಕೋಟಿ ಜನಸಂಖ್ಯೆ ಇದೆ. 28 ಲಕ್ಷ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೂ ಮೂಲಸೌಕರ್ಯ, ಮನೆ, ಶೌಚಾಲಯ, ವಿದ್ಯುತ್ ದೀಪಗಳು, ಹಕ್ಕುಪತ್ರ, ಶಿಕ್ಷಣ, ಕುಡಿಯುವ ನೀರು- ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.
 ಇಲಾಖೆಯ ಮಾಹಿತಿ, ಕುತೂಹಲ, ಜಿಜ್ಞಾಸೆ, ಆಸಕ್ತಿ, ಕೆಲವರ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ನಡೆದಿದೆ. ಪಕ್ಷದ ಎಸ್‍ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಮತ್ತವರ ತಂಡವು ಅನೇಕ ಸಲಹೆ ಸೂಚನೆಗಳನ್ನು ನೀಡಿದೆ ಎಂದು ತಿಳಿಸಿದರು. ತಿಗಳರ ಸಮಾಜದ ಮುಖಂಡರು, ಸ್ವಾಮೀಜಿಗಳೂ ಬಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸನ್ಮಾನ್ಯ ನಳಿನ್‍ಕುಮಾರ್ ಕಟೀಲ್ ಅವರ ಆದೇಶದಂತೆ ರಾಜ್ಯದ ಎಲ್ಲ ಮಂತ್ರಿಗಳಾದ ನಾವು ರಾಜ್ಯ ಕಾರ್ಯಾಲಯಕ್ಕೆ ಬಂದು ಜನರ ಅಹವಾಲಯ ಸ್ವೀಕರಿಸುತ್ತಿದ್ದೇವೆ. ಪಾರ್ಟಿಯ ಸಂಘಟನೆ ದೃಷ್ಟಿಯಿಂದ ಮತ್ತು ಅಹವಾಲು ಆಲಿಸುವ ದೃಷ್ಟಿಯಿಂದ ಇದೊಂದು ಒಳ್ಳೆಯ ನಿಯಮ ಎಂದು ಮೆಚ್ಚುಗೆ ಸೂಚಿಸಿದರು.
                                                                    

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments