Daily Horoscope

ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ !

Webdunia
ಸೋಮವಾರ, 11 ನವೆಂಬರ್ 2019 (11:10 IST)
ಹೊಸಕೋಟೆ : ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಅವರ ಸಹೋದರ ಪಿಳ್ಳಣ್ಣ ವಾಗ್ದಾಳಿ ನಡೆಸಿದ್ದಾರೆ.



ಎಂಟಿಬಿ ನಾಗರಾಜ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ತನ್ನ ಎದೆಯಲ್ಲಿದ್ದಾರೆ ಅಂತಿದ್ದ, ಬಳಿಕ ಜನರನ್ನು ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಿದ್ದ. ಈಗ ಬಿಎಸ್ ವೈಯನ್ನು ತನ್ನ ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಾನೆ. ಎಂಟಿಬಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

 

ಅವನ ಜೊತೆ ಹುಷಾರಾಗಿರು ಎಂದು ನಮ್ಮ ತಂದೆ ಹೇಳಿದ್ರು. ಎಂಟಿಬಿ ನಿನ್ನನ್ನೇ ಸಂಬಳಕ್ಕೆ ಇಟ್ಟುಕೊಳ್ತಾನೆ ಎಂದು ಹೇಳಿದ್ರು, ಕುರಿ ಕಡಿಯುವವರು ಒಂದು ಕ್ಷಣ ಯೋಚಿಸಿ ಕಡೀತಾರೆ. ಆದರೆ ಇವನು ಯೋಚನೆ ಮಾಡದೆ ಕಡಿತಾನೆ. ಅವನು ಕಟುಕ, ತಂತ್ರಿ, ಚಂಡಾಲ. ಇವನಿಗಾಗಿ ಏಟು ತಿಂದು ಹೋರಾಟ ಮಾಡಿ ಗೆಲ್ಲಿಸಿದ್ವಿ. ಅನ್ನ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ ಎಂದು ಅವರು ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆಯೂ ಕರ್ತವ್ಯದಲ್ಲಿ ಬ್ಯುಸಿಯಾದ ಸಿಎಂ ಡಿಕೆ ಶಿವಕುಮಾರ್‌

ಸಿಂಹಾಸನದಲ್ಲಿ ಕೂರುವ ರಾಜ ಯದುವೀರ್ ಒಡೆಯರ್ ಯಃಕಶ್ಚಿತ್ ಪೊಲೀಸ್ ಬಸ್ ನಲ್ಲಿ ಕೂರುವ ಹಾಗಾಯ್ತಲ್ಲಾ…

ಮುಂದಿನ ಸುದ್ದಿ
Show comments