Publish Date: Wed, 13 Dec 2017 (11:46 IST)
Updated Date: Wed, 13 Dec 2017 (11:52 IST)
ಬೆಂಗಳೂರು: ಪಿ.ಜಿ ಮಾಲೀಕನ ಕೊಲೆ ಮಾಡಿ ಅಲ್ಲಿದ್ದ ಹಣವನ್ನು ದೋಚಿದ ಘಟನೆ ಬೆಂಗಳೂರಿನ ಬಿ.ಟಿ.ಎಂ. ಲೇಔಟ್ ಬಾರ್ ರೋಡನಲ್ಲಿ ನಡೆದಿದೆ.
ತಿರುಮಲ ರೆಡ್ಡಿ(58) ಕೊಲೆಯಾದ ಪಿ.ಜಿ ಮಾಲೀಕ. ಪಿ.ಜಿಯಲ್ಲಿ ಅಡುಗೆ ಮಾಡುತ್ತಿದ್ದ ಬಿಹಾರಿ ಮೂಲದ ಅಡುಗೆ ಭಟ್ಟ ಕೊಲೆ ಮಾಡಿರುವ ಶಂಕೆ ಇದೆ. ನಿನ್ನೆ ರಾತ್ರಿ ಅವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಕೊಲೆ ಮಾಡಿ ಅಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿರಬಹುದು ಎಂಬ ಅನುಮಾನವಿದೆ.
ತಿರುಮಲ ರೆಡ್ಡಿಯ ಮೃತದೇಹ ಕೀಚನ್ ನಲ್ಲಿದ್ದು, ಬೆಳಗ್ಗೆ ಅವರ ಮಗ ಪಿಜಿಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಟಿವಿ ಆಫ್ ಮಾಡಿ ಕೊಲೆ ಮಾಡಲಾಗಿದೆ. ಪಿಜಿ ಮಾಲೀಕರ ಬಳಿ ಅಡುಗೆ ಭಟ್ಟನ ಬಗ್ಗೆ ಯಾವುದೆ ಮಾಹಿತಿ ಇಲ್ಲ. ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ