ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾಗಿರುವ ಆಡಿ, ಪೆಟ್ರೋಲ್ ಎಂಜಿನ್ ಹೊಂದಿರುವ ಎ-6 ಮ್ಯಾಟ್ರಿಕ್ಸ್ 35 ಟಿಎಫ್‌ಎಸ್‌ಐ ಸೆಡಾನ್ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿ ಶೋ ರೂಮ್ ದರ ಹೊರತುಪಡಿಸಿ ಈ ಹೊಸ ಆವೃತ್ತಿಯ ಕಾರುಗಳು 52.75 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿವೆ.
ಎ-6 ಮ್ಯಾಟ್ರಿಕ್ಸ್ 35 ಟಿಎಫ್‌ಎಸ್‌ಐ ಸೆಡಾನ್ ಆವೃತ್ತಿಯ ಹೊಸ ಕಾರುಗಳು ಸೆವೆನ್ ಸ್ಪೀಡ್ ಟ್ರಾನ್ಸ್ಮಿಶನ್, ಅಡ್ವಾನ್ಸ್ಡ್ ಇನ್‌ಫೊಟೈನ್‌ಮೆಂಟ್ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ಭಾರತೀಯ ಐಷಾರಾಮಿ ಕಾರು ಖರೀದಿದಾರರನ್ನು ಹಾಗೂ ಸುಸಜ್ಜಿತವಾದ ಪೆಟ್ರೋಲ್ ಎಂಜಿನ್ ಕಾರು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಎ-6 ಮ್ಯಾಟ್ರಿಕ್ಸ್ 35 ಟಿಎಫ್‌ಎಸ್‌ಐ ಸೆಡಾನ್ ಹೊಸ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಭಾರತದ ಆಡ್ ಕಂಪೆನಿ ಮುಖ್ಯಸ್ಥ ಜೋ ಕಿಂಗ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಎ-6 ಮ್ಯಾಟ್ರಿಕ್ಸ್ 35 ಟಿಎಫ್‌ಎಸ್‌ಐ ಸೆಡಾನ್ ಹೊಸ ಆವೃತ್ತಿಯ ಕಾರುಗಳು 1.87 ಲೀಟರ್ ಎಂಜಿನ್, 7.9 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗದ ಚಾಲನೆಯ ಸಾಮರ್ಥ್ಯ ಹೊಂದಿದೆ. ಚಾಲಕರ ರಕ್ಷಣೆಗಾಗಿ ಈ ಕಾರುಗಳಲ್ಲಿ ಎಂಟು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.
ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಡಿಸೇಲ್ ಆವೃತ್ತಿಯ ಎ-6 ಮ್ಯಾಟ್ರಿಕ್ಸ್ ಕಾರುಗಳು ಮಾರಾಟವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ