Webdunia - Bharat's app for daily news and videos

Install App

ನಮ್ಮ ಮೆಟ್ರೋ ಸ್ಟೇಷನ್ ಗೆ ಪುನೀತ್ ರಾಜ್ ಕುಮಾರ್ ಹೆಸರು

Krishnaveni K
ಸೋಮವಾರ, 10 ಜೂನ್ 2024 (11:38 IST)
ಬೆಂಗಳೂರು: ನಮ್ಮ ಮೆಟ್ರೋ ಸ್ಟೇಷನ್ ಒಂದಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರಿಡಲು ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಗೊಟ್ಟಿಗೆರೆ ಮತ್ತು ನಾಗವಾರ ನಡುವಿನ ಪಿಂಕ್ ಮಾರ್ಗದ ಪಾಟರಿ ಟೌನ್ ಸ್ಟೇಷನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲು ಒತ್ತಾಯ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ , ಮೆಟ್ರೋ ಎಂಡಿ, ಪ್ರಧಾನಿ ಮೋದಿ, ರಾಜ್ಯಪಾಲರಿಗೆ ಕರ್ನಾಟಕ ಬಹುಜನ ಫೆಡರೇಷನ್ ಪತ್ರ ಮುಖೇನ ಮನವಿ ಸಲ್ಲಿಸಿದೆ.

ಇದಕ್ಕೆ ಬಿಎಂಆರ್ ಸಿಎಲ್ ಕೂಡಾ ಪುನೀತ್ ಹೆಸರಿಡುವುದಾಗಿ ಭರವಸೆ ನೀಡಿದೆ. ಈ ರಸ್ತೆಯಲ್ಲಿ ಶೇ.50 ಕಾಮಗಾರಿ ಮುಗಿದಿದೆ. ಇದು ಪೂರ್ಣಗೊಂಡ ನಂತರ ನಿಲ್ದಾಣಕ್ಕೆ ಪುನೀತ್ ಹೆಸರಿಡಬೇಕು ಎಂದು ಸ್ಥಳೀಯ ನಿವಾಸಿಗಳು ನಮ್ಮ ಮೆಟ್ರೋಗೆ ಒತ್ತಾಯಿಸಿದ್ದಾರೆ.

ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು ಈ ನಿಲ್ದಾಣಕ್ಕೆ ಪುನೀತ್ ಹೆಸರಿಡುವ ಎಲ್ಲಾ ಸಾಧ್ಯತೆಗಳಿವೆ. ನಮ್ಮ ಮೆಟ್ರೊ ಪಿಂಕ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು ಈ ಮಾರ್ಗದಲ್ಲಿ ಸುಮಾರು 13.76 ಕಿ.ಮೀ. ಭೂಗತ ಮಾರ್ಗ ನಿರ್ಮಿಸಲಾಗುತ್ತಿದೆ. ಇದೀಗ ಕಾಮಗಾರಿ ನಡುವೆ ಬಂಡೆ ಬಂದಿದ್ದರಿಂದ ಕೊಂಚ ಅಡಚಣೆಯಾಗಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments