Publish Date: Wed, 28 Sep 2022 (07:10 IST)
Updated Date: Tue, 27 Sep 2022 (23:11 IST)
ಬೆಂಗಳೂರು : ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಮಾಡಲು ಅವಕಾಶ ಕೋರಿ ಮುರುಘಾ ಶ್ರೀಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮಠದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ. ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ನೀಡಲು ಆಗುತ್ತಿಲ್ಲ. ಹೀಗಾಗಿ ಜೈಲಿನಲ್ಲೇ ಇದ್ದುಕೊಂಡು ಹಣಕಾಸಿನ ವ್ಯವಹಾರಕ್ಕೆ ಸಹಿ ಹಾಕಲು ಅವಕಾಶ ಕಲ್ಪಿಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಜೈಲಧಿಕಾರಿಗಳು ಮನವಿ ತಿರಸ್ಕಾರ ಮಾಡಿದ್ದರು. ಅಲ್ಲದೇ ಚಿತ್ರದುರ್ಗದ ನ್ಯಾಯಾಲಯ ಕೂಡ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಮುರುಘಾ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.