Publish Date: Fri, 28 Sep 2018 (15:04 IST)
Updated Date: Fri, 28 Sep 2018 (15:06 IST)
ಆಧಾರ ಕಾಡ್೯ ಗಾಗಿ ಚರಂಡಿ ಮೇಲೆ ಜನರು ಮಲಗಿದ ಘಟನೆ ವರದಿಯಾಗಿದೆ.
ಆಧಾರ್ ಕಾರ್ಡಿಗಾಗಿ ಜನರು ಪರದಾಡುವಂತಾಗಿದೆ. ಹಗಲು ರಾತ್ರಿ ಆಧಾರ್ ಗೆ ಜನರ ಪರದಾಟ ನಡೆಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಎಸ್ ಬಿ ಐ ಬ್ಯಾಂಕಿನ ಮುಂಭಾಗ ಚರಂಡಿಯ ಮೇಲೆ ಜನರು ಮಲಗಿದ್ದಾರೆ. ಆಧಾರ್ ಕಾರ್ಡಿಗಾಗಿ ಸರತಿ ಸಾಲಿನಲ್ಲಿ ಹಗಲು- ರಾತ್ರಿ ಜನರು ಕಾಯುವಂತಾಗಿದೆ.
ಮಕ್ಕಳ ಮಹಿಳೆಯರ ಗೋಳಾಟ ಕೇಳಿಬರುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಆಧಾರ್ ಕಾರ್ಡ್ ಮಾಡಿಸಲು ಇಡೀ ರಾತ್ರಿ ಶಾಲೆ ಬಿಟ್ಟು ಮಕ್ಕಳೂ ಸಹ ಕಾಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ತಿಳಿದಿದ್ದರು ಬೇಜವಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಜನರು ದೂರಿದ್ದಾರೆ.