Publish Date: Mon, 16 Apr 2018 (14:13 IST)
Updated Date: Mon, 16 Apr 2018 (14:17 IST)
ಮೈಸೂರು : ಸಿಎಂ ಸಿದ್ದರಾಮಯ್ಯ ಬಂದ್ರೂ ನಮ್ಮನ್ನು ಸೋಲಿಸಲಾಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ,’ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು ಸೋಲಬೇಕು ಎನ್ನುವುದು ಜನ ತೀರ್ಮಾನ ಮಾಡುತ್ತಾರೆ. ಮತಗಳೇನು ಕುಮಾರಸ್ವಾಮಿ ಜೇಬಿನಲ್ಲಿಲ್ಲ. ಮೊಯ್ಲಿ ವಿರುದ್ಧ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೋತಾಗ ಇವರೆಲ್ಲಿ ಹೋಗಿದ್ರು’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂತಾ ಎಲ್ಲಿಯೂ ಹೇಳಿಲ್ಲ. ಇಷ್ಟು ಬಾರಿ ಸ್ಪರ್ಧೆ ಮಾಡಿದ್ರೂ, ಯಾವಾಗಲು 2 ಕಡೆ ಸ್ಪರ್ಧೆ ಮಾಡಿಲ್ಲ. ನಾನು ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧೆ ಮಾಡುವುದು ಎಂದು ಅವರು ಸ್ಪಷ್ಟಪಡಿಸಿದರು.
ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಚಾಮುಂಡೇಶ್ಚರಿ ಯಲ್ಲಿ ಪ್ರಚಾರ ಮಾಡಿದ್ದರು. ಆದ್ರೆ ಗೆದ್ದಿದ್ದು ಮಾತ್ರ ನಾನೇ, ಈಗಲೂ ಆದೇ ಮರುಕಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ