Webdunia - Bharat's app for daily news and videos

Install App

ಸಂಸತ್ ಸದನ – ಇನ್ಮುಂದೆ ಸಂವಿಧಾನ ಭವನ : ಪ್ರಧಾನಿ ಮೋದಿ

Webdunia
ಮಂಗಳವಾರ, 19 ಸೆಪ್ಟಂಬರ್ 2023 (20:00 IST)
ಹಳೆಯ ಸಂಸತ್ ಭವನವನ್ನು ಇನ್ನುಮುಂದೆ ಸಂವಿಧಾನ ಭವನ ಎಂದು ಹೆಸರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನೂತನ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾಗೆ ಪ್ರವೇಶಿಸುವ ಮುನ್ನ ಹಳೆಯ ಕಟ್ಟಡದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಷ್ಟು ದಿನ ಈ ಕಟ್ಟಡದಲ್ಲಿ ನಡೆದ ಸಂಸದೀಯ ನಡವಳಿಕೆಗಳ ಗೌರವ, ಘನತೆಗೆ ಕೊಂಚವೂ ಚ್ಯುತಿಯಾಗದಂತೆ ಅವುಗಳನ್ನು ಹೊಸ ಕಟ್ಟಡಕ್ಕೂ ಕೊಂಡೊಯ್ಯೋಣ ಎಂದು ಹೇಳಿದರು. 
ಮುಂದಿನ ಜನಾಂಗಕ್ಕೆ ಕೊಡುಗೆಯಾಗಲಿರುವ ಈ ಅವಕಾಶವನ್ನು ನಾವೆಂದು ಕಳೆದುಕೊಳ್ಳಬಾರದು ಎಂದು ನುಡಿದ ಪ್ರಧಾನಿ ಮೋದಿ, ಮುಂಬರುವ ದಿನಗಳಲ್ಲಿಯೂ ನೀವು ಇದೇ ರೀತಿಯ ವಿಶ್ವಾಸವನ್ನು ನೀಡಲಿದ್ದೇರೆಂಬ ಭರವಸೆ ನನಗಿದೆ. ಇದನ್ನು ನಾವು ಕೇವಲ ಹಳೆಯ ಪಾರ್ಲಿಮೆಂಟ್ ಎಂದು ಕರೆಯುವುದು ಬೇಡ. ನಿಮ್ಮಲ್ಲರ ಅನುಮತಿಯೊಂದಿಗೆ ಈ ಕಟ್ಟಡವು ಮುಂದೆ ಸಂವಿಧಾನ ಭವನವೆಂದು ಹೆಸರಾಗಲಿದೆ ಎಂದು ನುಡಿದರು. 
 
ಹಳೆಯ ಕಟ್ಟಡವನ್ನು ನೆಲಸಮ ಮಾಡುವುದಿಲ್ಲ. 1927 ರಲ್ಲಿ ನಿರ್ಮಾಣಗೊಂಡ 96 ವರ್ಷದ ಈ ಪುರಾತನ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿ ಸಂಸದೀಯ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗುವಂತೆ ಸುಸಜ್ಜಿತಗೊಳಿಸಲಾಗುವುದು ಎಂದು ಸಂಸತ್ ಭವನದ ಮೂಲಗಳು ತಿಳಿಸಿವೆ. 
 
ಪಾರಂಪರಿಕ ವಿಶೇಷತೆಯ ದೃಷ್ಟಯಿಂದ ಐತಿಹಾಸಿಕ ವಿನ್ಯಾಸವನ್ನು ಯಥಾವತ್ತಾಗಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments