ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್

Webdunia
ಮಂಗಳವಾರ, 19 ಸೆಪ್ಟಂಬರ್ 2023 (19:40 IST)
ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡುತ್ತಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್​ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪ್ರೇಮಿಗಳ ವಿಡಿಯೋ ಸೆರೆ ಹಿಡಿದು ಬಳಿಕ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ ನಯನಾ ಹಾಗೂ ಪಾರ್ಟ್ನರ್ ಕಿರಣ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮಿಗಳಿಗೆ ರೂಮ್​ ವ್ಯವಸ್ಥೆ ಮಾಡಿಕೊಟ್ಟು ಇದೀಗ ಅವರೇ ಪ್ರೇಮಿಗಳ​ ಖಾಸಗಿ ವಿಡಿಯೋ ಇಟ್ಟುಕೊಂಡು ಲಕ್ಷ ಲಕ್ಷ ಹಣ ನೀಡುವಂತೆ ಬ್ಲ್ಯಾಕ್​​ ಮೇಲ್​ಗೆ ಇಳಿದಿದ್ದರು. ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್​​ನಲ್ಲಿ ಪ್ರೇಮಿಗಳಿಗೆ ರೂಮ್​ ನೀಡಲಾಗಿತ್ತು. ಆದ್ರೆ, ರೂಮ್​ನಲ್ಲಿ ರಹಸ್ಯವಾಗಿ‌ ಕ್ಯಾಮೆರಾ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟ್ನರ್ ಕಿರಣ್ ಎನ್ನುವವರು ಯುವತಿಗೆ ಬ್ಲ್ಯಾಕ್​ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು. ಒಂದು ಲಕ್ಷ ಹಣ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ. ಇದರಿಂದ ಯುವತಿ ಹೆದರಿಕೊಂಡು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್​ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರವೂ ರಾಜ್ಯದಲ್ಲಿ ಮಳೆಯಿರುತ್ತಾ, ವಾರದ ಹವಾಮಾನ ವರದಿ ಇಲ್ಲಿದೆ

ನೀಟ್‌ ಪ್ರಶ್ನೆ ಪತ್ರಿಕೆ ಅಕ್ರಮ: ಆರ್‌ಎಸ್‌ಎಸ್‌, ಬಿಜೆಪಿ ಕೈವಾಡವೆಂದ ಪ್ರಿಯಾಂಕ್ ಖರ್ಗೆ

ಸರ್ಕಾರ ಸ್ಥಿರವಾಗಿದ್ದು, ಆಡಳಿತದಲ್ಲಿ ಯಾವುದೇ ಗೊಂದಲವಿಲ್ಲ: ಸಚಿವ ಈಶ್ವರ್ ಖಂಡ್ರೆ

ಸತೀಶನ್‌ ಪ್ರಮಾಣ ವಚನ: ಮಲ್ಲಿಕಾರ್ಜುನ್ ಖರ್ಗೆ, ರಾಹುಲ್‌ ಭಾಗಿ, ವಿಜಯ್‌ ಕೂಡಾ ಭಾಗಿಯಾಗುವ ಸಾಧ್ಯತೆ

ಬಹುಶಃ ಕಮಲ್ ಹಾಸನ್ ಸಿಎಂ ಆಗಿದ್ದರೆ ಅಸೂಯೆ ಪಡುತ್ತಿದ್ದೆ: ವಿಜಯ್ ಬಗ್ಗೆ ಅಸೂಯೆಗೆ ಸ್ಪಷ್ಟನೆ ಕೊಟ್ಟ ನಟ ರಜನಿಕಾಂತ್‌

ಮುಂದಿನ ಸುದ್ದಿ
Show comments