Select Your Language

Notifications

webdunia
webdunia
webdunia
webdunia

ಸಿಎಂ ವಿರೋಧದ ನಡುವೆಯೂ ನಡೆಯಲಿದೆ ಪರ್ಜನ್ಯ ಹೋಮ

ಸಿಎಂ ವಿರೋಧದ ನಡುವೆಯೂ ನಡೆಯಲಿದೆ ಪರ್ಜನ್ಯ ಹೋಮ
Bangalore , ಶನಿವಾರ, 3 ಜೂನ್ 2017 (10:36 IST)
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರೋಧದ ನಡುವೆಯೂ ಮಳೆಗಾಗಿ ನೀರಾವರಿ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಭಾಗಮಂಡಲದಲ್ಲಿ ಪರ್ಜನ್ಯ ಹೋಮ ನಡೆಯಲಿದೆ.

 
ಪೂಜೆಗೆ ಸರ್ಕಾರಿ ದುಡ್ಡು ಬಳಸಬೇಡಿ ಎಂದು ಸಿಎಂ ಹುಕುಂ ಹೊರಡಿಸಿದ್ದರೂ, ನೀರಾವರಿ ಸಚಿವರು ಸ್ವ ಹಿತಾಸಕ್ತಿಯಿಂದ ಕೇರಳದಿಂದ ಪುರೋಹಿತರನ್ನು ಕರೆಸಿಕೊಂಡು ಪೂಜೆ ನಡೆಸುತ್ತಿದ್ದಾರೆ.

ಈ ನಡುವೆ ಸಿಎಂಗೆ ಮಾತ್ರ ಇದರಲ್ಲಿ ನಂಬಿಕೆಯಿಲ್ಲ. ಇದು ನಮ್ಮ ನಮ್ಮ ನಂಬಿಕೆಗೆ ಬಿಟ್ಟ ವಿಚಾರ. ಪರ್ಜನ್ಯ ಹೋಮ ಮಾಡುವುದು ಮೂಢನಂಬಿಕೆಯಲ್ಲ ಎಂದು ನೀರಾವರಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಮೂಢನಂಬಿಕೆಗಳ ವಿರೋಧಿ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅತ್ತ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಎ ಎಸ್ ಅಧಿಕಾರಿ ಅನುರಾಗ್ ತಿವಾರಿ ಬೋಗಸ್ ರೇಷನ್ ಕಾರ್ಡ್ ಹಗರಣದ ತನಿಖೆ ನಡೆಸುತ್ತಿದ್ದರು