ಪರಿವರ್ತನಾ ಯಾತ್ರೆ ವಿಫಲಕ್ಕೆ ಅಶೋಕ್ ಕಾರಣ: ವರದಿ ಕೇಳಿದ ಅಮಿತ್ ಷಾ

Webdunia
ಸೋಮವಾರ, 6 ನವೆಂಬರ್ 2017 (19:54 IST)
ಬೆಂಗಳೂರು: ಬಿಜೆಪಿಯ ಮಹತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಮಾಜಿ ಡಿಸಿಎಂ ಆರ್‍.ಅಶೋಕ್‍ ಕಾರಣ ಎಂದು ನೇರವಾಗಿ ಆರೋಪ ಕೇಳಿಬಂದಿದೆ.

ಸಮಾವೇಶದ ಸಂಚಾಲಕರಾಗಿದ್ದ ಅಶೋಕ್ ಸೂಕ್ತವಾಗಿ ಕಾರ್ಯಕ್ರಮವನ್ನು ನಿರ್ವಹಿಸದಿರುವುದು ಗೊಂದಲಕ್ಕೆ ಕಾರಣ ಎಂದು ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಬಲ ಒಕ್ಕಲಿಗ ನಾಯಕ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‍ ಷಾಗೆ ದೂರು ಕೊಟ್ಟಿದ್ದಾರೆ.

ಕಾರ್ಯಕ್ರಮಕ್ಕೆ ಬರೋಬ್ಬರಿ 3 ಲಕ್ಷ ಮಂದಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿತ್ತು. 14 ಜಿಲ್ಲೆಗಳ ಪ್ರತಿ ಬೂತ್‌ ನಿಂದ ತಲಾ ಮೂರು ಬೈಕ್‌ ನಲ್ಲಿ ಆರು ಜನ ಆಗಮಿಸುವಂತೆ ಯೋಜನೆ ರೂಪಿಸಲಾಗಿತ್ತು. ಎಲ್ಲ ಸವಾರರ ಹೆಸರು, ದೂರವಾಣಿ ಸಂಖ್ಯೆ ಪಟ್ಟಿ ಮಾಡಿ ಪ್ರಕಟಿಸಲಾಗಿತ್ತು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಆರ್.ಅಶೋಕ್ ಅವರಿಗೆ ವಹಿಸಲಾಗಿತ್ತು. ಆದರೆ, ಪಕ್ಷದ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಆಗಮಿಸುವ ವೇಳೆಗೆ ಕಾರ್ಯಕ್ರಮದಲ್ಲಿ ಅರ್ಧದಷ್ಟು ಮೈದಾನ ಖಾಲಿ ಖಾಲಿಯಾಗಿತ್ತು. ಇದರಿಂದ ಭಾರೀ ಮುಜುಗರ ಎದುರಿಸಬೇಕಾಗಿ ಬಂತು.

ಪರಿವರ್ತನಾ ಯಾತ್ರೆಗೆಂದೇ ಭಾರೀ ಕಾರ್ಯತಂತ್ರದ ಹೊರತಾಗಿಯೂ ಉದ್ಘಾಟನೆ ಸಮಾವೇಶದಲ್ಲಿ ಜನ ಪಾಲ್ಗೊಳ್ಳದಿರುವ ಬಗ್ಗೆ ಅಮಿತ್ ಷಾ ರಾಜ್ಯ ಘಟಕದಿಂದ ವರದಿ ಕೇಳಿದ್ದಾರೆ. ಪಕ್ಷದ ತಯಾರಿ ಹೇಗಿತ್ತು, ಅವ್ಯವಸ್ಥೆಗೆ ಕಾರಣವೇನು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಮುಂದಿನ ಸಮಾವೇಶಗಳಲ್ಲಿ ಈ ಎಡವಟ್ಟು ಮರುಕಳಿಸದಂತೆ ಎಚ್ಚರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ದಲಿತರಿಗೆ ಮೀಸಲಾಗಿದ್ದ 25,000 ಕೋಟಿ ಗ್ಯಾರಂಟಿಗೆ ಬಳಕೆ: ಒಪ್ಪಿಕೊಂಡ ಸಚಿವ ಮಹದೇವಪ್ಪ

ಮುಂದಿನ ಸುದ್ದಿ
Show comments