Webdunia - Bharat's app for daily news and videos

Install App

ಡಿಸ್ಕಸ್ ನಲ್ಲಿ ವಿನೋದ್ ಗೆ ಕಂಚು: ಒಂದೇ ದಿನ 3 ಪದಕ ಗೆದ್ದ ಭಾರತ ದಾಖಲೆ!

Webdunia
ಭಾನುವಾರ, 29 ಆಗಸ್ಟ್ 2021 (19:56 IST)
ಭಾರತದ ವಿನೋದ್ ಕುಮಾರ್ ಡಿಸ್ಕಸ್ ಎಸೆತ ಸ್ಪ
ರ್ಧೆಯಲ್ಲಿ ಕಂಚಿನ ಪದಕ ಸಂಪಾದಿಸಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಒಂದೇ ದಿನ ಭಾರತ 3 ಪದಕಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ.
ಭಾನುವಾರ ನಡೆದ ಪುರುಷರ ಡಿಸ್ಕಸ್ ಎಸೆತ ಸ್ಪರ್ಧೆಯ ಎಫ್ 52 ವಿಭಾಗದಲ್ಲಿ ವಿನೋದ್ ಕುಮಾರ್ 19.91 ಮೀ. ದೂರ ದಾಖಲಿಸಿ ಏಷ್ಯನ್ ದಾಖಲೆ ಮುರಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡರು.
ಪ್ಯಾರಾಲಿಂಪಿಕ್ಸ್ ನ 5ನೇ ದಿನವಾದ ಭಾನುವಾರ ಭಾರತ 3 ಪದಕ ಗೆದ್ದುಕೊಂಡಿದ್ದು, 2016ರ ರಿಯೋ ಒಲಿಂಪಿಕ್ಸ್ ನಲ್ಲಿ 4 ಪದಕದ ದಾಖಲೆ ಸರಿಗಟ್ಟಲು ಕೇವಲ ಒಂದು ಪದಕ ಬೇಕಿದೆ. ಇದಕ್ಕೂ ಮುನ್ನ ಟೇಬಲ್ ಟೆನಿಸ್ ನಲ್ಲಿ ಭಾವಿಯಾ ಪಟೇಲ್ ಮತ್ತು ಹೈ ಜಂಪ್ ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಭಾರತೀಯ ಯೋಧನಾಗಿರುವ ವಿನೋದ್ ಕುಮಾರ್ ಅಪಘಾತವೊಂದರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸುಮಾರು ಒಂದು ದಶಕದ ಕಾಲ ಹಾಸಿಗೆ ಹಿಡಿದಿದ್ದರು. ಆದರೆ 2016ರ ರಿಯೊ ಒಲಿಂಪಿಕ್ಸ್ ನಿಂದ ಸ್ಫೂರ್ತಿ ಪಡೆದು ಸತತ ಅಭ್ಯಾಸ ನಡೆಸಿದ್ದೂ ಅಲ್ಲದೇ ಮೊದಲ ಪ್ರಯತ್ನದಲ್ಲಿ ಕಂಚಿನ ಪದಕ ಗೆದ್ದು ಸ್ಫೂರ್ತಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

ಮುಂದಿನ ಸುದ್ದಿ
Show comments