Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಯುದ್ಧ ಸಾರಲು ಒತ್ತಾಯ

webdunia
ಚಿಕ್ಕಮಗಳೂರು , ಶನಿವಾರ, 16 ಫೆಬ್ರವರಿ 2019 (09:57 IST)
ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆಗಳು ಮುಂದುವರಿದಿವೆ.
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಪ್ರತಿಭಟನೆ ನಡೆಸಲಾಯಿತು. ಭಜರಂಗದಳ ಹಾಗೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಉಗ್ರರ, ದೇಶ ದ್ರೋಹಿಗಳ ಹೀನ ಕೃತ್ಯವನ್ನು ಖಂಡಿಸಲಾಯಿತು.

ಉಗ್ರ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಯುದ್ಧ ಸಾರುವಂತೆ ಒತ್ತಾಯ ಮಾಡಲಾಯಿತು. ದೇಶದ ಪ್ರತಿಯೊಬ್ಬರ ಮನೆಯಲ್ಲೂ ದೀಪ ಹಚ್ಚಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಲು ಒತ್ತಾಯ ಮಾಡಲಾಯಿತು. ದೇಶದ್ರೋಹಿಗಳನ್ನು ಸದೆ ಬಡಿದ ನಂತರ ದೀಪವನ್ನು ವಿಸರ್ಜಿಸುವಂತೆ ಮನವಿ ಮಾಡಲಾಯಿತು.  

ಭಾರತ ದೇಶದ ಸೈನಿಕರು ಹೇಡಿಗಳಲ್ಲ. ನಮ್ಮ ಸೈನಿಕರು ವೀರರು, ಧೀರರು ತೊಡೆ ತಟ್ಟಿ ನಿಲ್ಲುವವರು 
ಇಂತಹ ದೇಶಕ್ಕಾಗಿ ಮಣಿದ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ ಬಳಕೆದಾರರಿಗೆ ಒಳ್ಳೆಯ ಸುದ್ದಿ: 84 ದಿನಗಳ ಉಚಿತ ಡೇಟಾ ಮತ್ತು ಅಪರಿಮಿತ ಕರೆ