Select Your Language

Notifications

webdunia
webdunia
webdunia
webdunia

ಆಕ್ಸಿಜನ್ ಕೊರೊನಾಯಿಂದ ಯಾರೂ ಸತ್ತಿಲ್ಲ:ಕೇಂದ್ರ ಸರಕಾರ

ಆಕ್ಸಿಜನ್ ಕೊರೊನಾಯಿಂದ ಯಾರೂ ಸತ್ತಿಲ್ಲ:ಕೇಂದ್ರ ಸರಕಾರ
bangalore , ಮಂಗಳವಾರ, 20 ಜುಲೈ 2021 (20:01 IST)
ಕೇಂದ್ರದ ಉತ್ತರಕ್ಕೆ ಪ್ರತಿಪಕ್ಷಗಳ ಆಕ್ರೋಶ. ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆಯಿಂದ ಯಾರೂ ಕೊರೊನಾ ಸೋಂಕಿತರು ಸತ್ತಿಲ್ಲ ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರ ಅಚ್ಚರಿ ಹೇಳಿಕೆ ನೀಡಿದೆ.
ಸೋಂಕಿತರು ಆಮ್ಲಜನಕದ ಕೊರತೆಯಿಂದ ರಸ್ತೆ ಹಾಗೂ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂಬ ವರದಿಗಳು ನಿಜವೇ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಇಲಾಖೆ ರಾಜ್ಯ ಖಾತೆ ಸಚಿವೆ ಭಾರತಿ ಪರ್ವಿನ್ ಈ ರೀತಿ ಹೇಳಿದ್ದಾರೆ.
ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ಗೆ ಅತ್ಯಧಿಕ ಬೇಡಿಕೆ ಸೃಷ್ಟಿಯಾಗಿತ್ತು ಎಂಬುವುದನ್ನು ಒಪ್ಪಿಕೊಂಡ ಸರ್ಕಾರ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸದನಕ್ಕೆ ಹೇಳಿದೆ.
ಆರೋಗ್ಯ ವಿಚಾರ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಯಾವುದೇ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿಲ್ಲ. ಆದರೆ ಕೆಲ ಸರ್ಕಾರಗಳು ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯನ್ನು ಮರು ತಿದ್ದುಪಡಿ ಮಾಡಿ ಕಳುಹಿಸಿದ್ದಾರೆ ಎಂದು ಸಚಿವೆ ಮಾಹಿತಿ ನೀಡಿದರು. 
ಆಕ್ಸಿಜನ್ ಕೊರತೆ, ಪೂರೈಕೆಯು ಆಸ್ಪತ್ರೆ ಹಾಗೂ ಆಕ್ಸಿಜನ್ ಪೂರೈಕೆದಾರರ ನಡುವಿನ ವಿಚಾರ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ಆದರೂ ಕೊರೊನಾ 2ನೇ ಅಲೆ ವೇಳೆ ದೇಶಾದ್ಯಂತ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಕ್ಸಿಜನ್ ವಿತರಣೆಗೆ ಮುಂದಾಗಿತ್ತು ಎಂದಿದ್ದಾರೆ.
ಕೊರೊನಾ 2ನೇ ಅಲೆ ವೇಳೆ ಸಾವಿರಾರು ಜನ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ನಿತ್ಯವೂ ವರದಿಯಾಗಿದೆ. ಆದರೆ ಯಾವುದೇ ಸಾವು ಆಕ್ಸಿಜನ್ ಕೊರತೆಯಿಂದ ಆಗಿಲ್ಲ ಎಂಬ ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರತಿಪಕ್ಷಗಳನ್ನು ಕೆರಳಿಸಿದೆ. 
ಆಕ್ಸಿಜನ್ ಕೊರತೆಯಿಂದ ಜನ ಸತ್ತಿದ್ದರಿಂದಲೇ ವಿಶ್ವದ ಹಲವು ರಾಷ್ಟ್ರಗಳು ಆಕ್ಸಿಜನ್ ಕಳುಹಿಸಿಕೊಟ್ಟಿದ್ದು. ಸೋಂಕಿತರು ಸಾವನ್ನು ಕಂಡೇ ಇಡೀ ವಿಶ್ವ ಭಾರತದ ನೆರವಿಗೆ ಬಂದಿದ್ದು. ಕೇವಲ ಕಾಗದದ ಮೇಲೆ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎಂದು ನಮೂದಿಸಿದಾಕ್ಷಣಕ್ಕೆ ಸತ್ಯ ಮರೆ ಮಾಚಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ಲೈನ್ ಹಣ ಹೂಡಿಕೆ ಮಾಡೋ ಮುನ್ನ ಎಚ್ಚರ!