ಬೆಳಗಾವಿ : ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕಾಯ್ದೆ ಮಂಡನೆಗೆ ಮುಂದಾದರೆ ಅದರ ಪೀಠಿಕೆಗೆ ನಮ್ಮ ವಿರೋಧ ಇದೆ.
ಚರ್ಚೆಯಲ್ಲಿ ಭಾಗವಹಿಸುವುದು ಬೇರೆ ಮಾತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ನಾವು ಚರ್ಚೆಗೆ ಅವಕಾಶ ನೀಡಿಲ್ಲ, ಮತ್ತು ಬೈರತಿ ಬಸವರಾಜ್ ರಾಜೀನಾಮೆ ಪಡೆಯಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಧರಣಿ ಪ್ರಾರಂಭ ಮಾಡಿದ್ದೆವು.
ರಾಜ್ಯದಲ್ಲಿ ಸಾಕಷ್ಟು ಗಂಭೀರ ಸಮಸ್ಯೆಗಳಿವೆ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ದ್ವಂಸ ಮಾಡಲಾಗಿದೆ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಳವಾಗಿದೆ,
ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ, ಉತ್ತರ ಕರ್ನಾಟಕದ ಮಹದಾಯಿ, ಕೃಷ್ಣ ನದಿನೀರಿನ ವಿಚಾರ, ಎತ್ತಿನಹೊಳೆ ಯೋಜನೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಿಟ್ ಕಾಯಿನ್, 40% ಕಮಿಷನ್ ವಿಚಾರ ಮುಂತಾದ ಗಂಭೀರ ವಿಷಯಗಳ ಚರ್ಚೆ ನಡೆಸುವ ಉದ್ದೇಶದಿಂದ ಧರಣಿ ಕೈಬಿಟ್ಟಿದ್ದೇವೆ.