Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲದ ಆಡಿಯೋ ಪ್ರಕರಣ; ಕಲಬುರಗಿಯ ಹೈಕೋರ್ಟ್ ನಿಂದ ತೀರ್ಪು ಪ್ರಕಟ

ಆಪರೇಷನ್ ಕಮಲದ  ಆಡಿಯೋ ಪ್ರಕರಣ; ಕಲಬುರಗಿಯ ಹೈಕೋರ್ಟ್ ನಿಂದ ತೀರ್ಪು ಪ್ರಕಟ
ಕಲಬುರ್ಗಿ , ಶುಕ್ರವಾರ, 22 ಫೆಬ್ರವರಿ 2019 (12:40 IST)
ಕಲಬುರ್ಗಿ : ಆಪರೇಷನ್ ಕಮಲದ  ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ದ ದಾಖಲಾದ ಎಫ್.ಐ.ಆರ್. ರದ್ದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿಯ ಹೈಕೋರ್ಟ್  ಪೀಠ ಇಂದು  ತೀರ್ಪು ಪ್ರಕಟಿಸಿದೆ.

ಫೆ. 13 ರಂದು ಶರಣುಗೌಡ ಮೂಲಕ ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡಗೆ ಆಫರ್ ಕೊಟ್ಟಿದ್ದ ಸಂಬಂಧ ಬಿಎಸ್ ವೈ  ಸೇರಿ ನಾಲ್ಚರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿ ಎಫ್ ಐಆರ್ ಕೂಡ  ದಾಖಲಾಗಿತ್ತು.

 

ಈ ಹಿನ್ನಲೆಯಲ್ಲಿ ಬಿಎಸ್ ವೈ ಪರ ವಕೀಲರು ಎಫ್.ಐ.ಆರ್. ರದ್ದು ಕೋರಿ ಕಲಬುರಗಿಯ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ  ವಿಚಾರಣೆ ನಡೆಸಿದ ಕೋರ್ಟ್ ಇಂದು ಬಿಎಸ್ ವೈ  ಸೇರಿ ನಾಲ್ಚರ ವಿರುದ್ಧದ  ಎಫ್.ಐ.ಆರ್.ಗೆ ಮಧ್ಯಂತರ ತಡೆ ನೀಡಿದೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು