ಬಹಿರಂಗ ಗುದ್ದಾಟದಿಂದ ಬಿಜೆಪಿ ಶಿಸ್ತು ಕುಸಿತಕ್ಕೆ ಬ್ರೇಕ್

Webdunia
ಶುಕ್ರವಾರ, 30 ಜೂನ್ 2023 (22:02 IST)
ಬೆಂಗಳೂರು : ಸೋಲು ಯಾವಾಗಲೂ ಹಾಗೆ ಅನಾಥ. ಗೆಲುವಿಗಷ್ಟೇ ಮಾಲೀಕ ಎಂಬದು ಎಲ್ಲರ ಆಟ. ಇದು ಬಿಜೆಪಿ ಮನೆಯೊಳಗಿನ ನೆಮ್ಮದಿಯನ್ನು ಕೆಡಿಸಿದೆ. ಬಹಿರಂಗ ಗುದ್ದಾಟದಿಂದ ಬಿಜೆಪಿ ಶಿಸ್ತು ಕುಸಿತಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆದಿದೆ.

ರೇಣುಕಾಚಾರ್ಯ ಮಾತ್ರ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿಯ ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ.

3 ತಿಂಗಳ ಹಿಂದೆ ತಿಳಿ ನೀರಿನ ಕೊಳದಲ್ಲಿ ಕಮಲ ನಳನಳಿಸುತ್ತಿತ್ತು. ಆದರೆ ಮೇ 13ರ ಬಳಿಕ ಕದಡಿದ ಕೊಳದಲ್ಲಿ ಕಮಲ ವಿಲವಿಲ ಅಂತಿದೆ. ಸೋಲಿನ ಕಹಿ ಬಿಜೆಪಿ ನಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಹೊಂದಾಣಿಕೆ ರಾಜಕಾರಣದ ಕಿಡಿ ಹೊತ್ತಿ ಬೇಯುತ್ತಿದೆ. ಡಜನ್ಗೂ ಹೆಚ್ಚು ನಾಯಕರು ಬಹಿರಂಗವಾಗಿ ವಾಕ್ಸಮರಕ್ಕೆ ಇಳಿದಿದ್ದಾರೆ.

ಇದರ ಬೆನ್ನಲ್ಲೇ ವರದಿ ಪಡೆದ ಬಿಜೆಪಿ ಹೈಕಮಾಂಡ್ ಶಿಸ್ತಿನ ಗೆರೆ ಅಳಿಸಿ ಹೋಗದಂತೆ ತಡೆಯಬೇಕೆಂಬ ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಕಟೀಲ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಒಳಗೊಂಡ ಐವರು ನಾಯಕರ ನೇತೃತ್ವದಲ್ಲಿ ವಿವರಣೆ ಪಡೆದು ಎಚ್ಚರಿಕೆ ಕೊಡುವ ಸಭೆ ನಡೆಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಬ್ಬು ಬೆಳೆಗಾರರ ಸಂಧಾನದ ಬಳಿಕ ಸ್ವೀಟ್ ಹಂಚಿ ಸಂಭ್ರಮಿಸಿದ ವಿಜಯೇಂದ್ರ

ನಮಗೂ ಬೇಕು ಸ್ವಾತಂತ್ರ್ಯ: ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ನಾಯಿ ಪ್ರಿಯರ ಹೊಸ ಟ್ರೆಂಡ್

ರೈತರು ಪ್ರತಿಭಟನೆ ಮಾಡುತ್ತಿದ್ದರೆ ಕೇಂದ್ರ ಏನು ಕಳ್ಳೆಕಾಯಿ ತಿನ್ನುತ್ತಿದ್ಯಾ: ಕೃಷ್ಣ ಭೈರೇಗೌಡ ಕಿಡಿ

ರೈತರ ಪ್ರತಿಭಟನೆ ನಡುವೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಎಲ್ಲಿ ಹೋದ್ರು

Karnataka Weather: ಈ ವಾರಂತ್ಯಕ್ಕೆ ಮಳೆಯ ಸೂಚನೆಯಿದೆಯಾ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments