Publish Date: Mon, 04 May 2020 (09:42 IST)
Updated Date: Mon, 04 May 2020 (09:44 IST)
ಬೆಂಗಳೂರು : ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಇಂದು ಓಪನ್ ಮಾಡಲು ಅಬಕಾರಿ ಇಲಾಖೆ ಅನುಮತಿ ನೀಡಿದೆ.
ಲಾಕ್ ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಅಬಕಾರಿ ಇಲಾಖೆ ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಿದೆ. ಹೀಗಾಗಿ ಬೆಂಗಳೂರು, ಮಂಡ್ಯ, ರಾಯಚೂರು, ಉಡುಪಿ, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ರಾಮನಗರ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮದ್ಯದಂಗಡಿ ಓಪನ್ ಮಾಡಲಾಗಿದೆ.
ಈಗಾಗಲೇ ಮದ್ಯದಂಗಡಿಗಳ ಮುಂದೆ ಮದ್ಯ ಪ್ರಿಯರು ಸಾಲುಗಟ್ಟಿ ನಿಂತಿದ್ದು, ಬಾಟಲ್ ಗಳನ್ನು ಬ್ಯಾಗ್ ಗೆ ತುಂಬಿಸಿಕೊಂಡು ಖುಷಿಯಿಂದ ಮನೆಗಳಿಗೆ ತೆರಳುತ್ತಿದ್ದಾರೆ.