Webdunia - Bharat's app for daily news and videos

Install App

ಸಾವಿನಲ್ಲಿ ಒಂದಾದ ಪ್ರೇಮಿಗಳು

Webdunia
ಭಾನುವಾರ, 15 ಮೇ 2022 (15:05 IST)
ತುಮಕೂರು: ಪ್ರೇಮಿಗಳು ಸಾವಿನಲ್ಲಿ ಒಂದಾಗಿದ್ದಾರೆ. ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು.  ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ. ಯುವಕನ ಸಮಾಧಿ ಪಕ್ಕ ಸುಷ್ಮಾ ಅಂತ್ಯಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದಾರೆ.
 
ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡು, ಪ್ರೇಮಿಗಳಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ, ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತುಮಕೂರು ತಾಲ್ಲೂಕಿನ ಅರೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಸುಷ್ಮಾ ಮೃತ ದುರ್ದೈವಿ.‌  
 
ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು.  ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ. 
ಮಸ್ಕಲ್ ಮೂಲದ ಧನುಷ್,  ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ, ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ, ಧನುಷ್  ಕಳೆದ ಮೇ 11ನೇ ತಾರೀಕು ಬೈಕ್ ನಲ್ಲಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ದಾಬಸ್ಪೇಟೆ ಸಮೀಪದ ಕುಲುವನಹಳ್ಳಿ ಬಳಿ ಅಪಘಾತವಾಗಿ ಸಾವನಪ್ಪಿದ್ದಾನೆ.‌  
 
ಪ್ರೀಯಕರ ಸಾವಿನಿಂದ ಆಘಾತಕ್ಕೊಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ. 
ಸುಷ್ಮಾ  ವಿಷ ಸೇವಿಸಿರುವುದು ಗೊತ್ತಾಗುತ್ತಿದ್ದಂತೆ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆ ವೇಳೆಗಾಗಲೇ ವಿಷ ಸಂಪೂರ್ಣ ದೇಹದಲ್ಲಿ ಬೆರೆತು ಇಹಲೋಕ ತ್ಯಜಿಸಿದ್ದಾಳೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments