ಸೆ.18ರಿಂದ ಸೆ.22ರವರೆಗೆ ವಿಶೇಷ ಸಂಸತ್ ಸದನ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಸಿಳಿತ್ತು. ಹಲವು ಮಸೂದೆಯನ್ನು ಮಂಡಿಸಲು ಬಾಕಿ ಇರುವ ಕಾರಣ ಈ ವಿಶೇಷ ಅಧಿವೇಶವನ್ನು ಕರೆಯಲಾಗಿದೆ. ಇದಕ್ಕೂ ಮುನ್ನ ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಕೇಂದ್ರ ರಚಿಸಲಿದೆ. ದೆಹಲಿಯ ಜಿ 20 ಶೃಂಗಸಭೆಯ ನಂತರ ವಿಶೇಷ ಅಧಿವೇಶನ ನಡೆಯಲಿದೆ. ಜಿ.20 ಭಾರತದ ಅಂತರಾಷ್ಟ್ರೀಯ ಸ್ಥಾನಮಾನವನ್ನು ಗುರುತಿಸುವ ಸಂಕೇತವೆಂದು ಸರ್ಕಾರ ಹೇಳಿದೆ. ಈ ವಿಶೇಷ ಅಧಿವೇಶನದ ಶಾಸಕಾಂಗ ಕಾರ್ಯಸೂಚಿಯ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಅಧಿವೇಶ ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಬಲವಾದ ರಾಜಕೀಯ ಸಂದೇಶವನ್ನು ನೀಡುವಂತಿದೆ ಎಂದು ಹೇಳಲಾಗಿದೆ.