Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್
ಬೆಂಗಳೂರು: , ಸೋಮವಾರ, 15 ಮೇ 2017 (12:33 IST)
ನಗರದ ಸಿಲ್ಕ್‌ಬೋರ್ಡ್ ಬಳಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದ ಯುವತಿಯ ಮೇಲೆ ಆರೋಪಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.
 
ಸಿಲ್ಕ್‌ಬೋರ್ಡ್ ಬಳಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದ ಯುವತಿಗೆ ಆರೋಪಿ, ಲೈಂಗಿಕ ಕಿರುಕುಳ ನೀಡಿ ಕೈಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ಯುವತಿ ಜೋರಾಗಿ ಕೂಗಿದ್ದಾಳೆ. ಯುವತಿಯ ಕೂಗು ಕೇಳಿ ಬಂದ ಜನರು ಆರೋಪಿಯನ್ನು ಮನಬಂದಂತೆ ಥಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.
 
ಘಟನಾ ಸ್ಥಳಕ್ಕೆ ಬಂದ ಮಡಿವಾಳ ಠಾಣೆಯ ಪೊಲೀಸರಿಗೆ ಜನರು ಆರೋಪಿಯನ್ನು ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ ನಕಲಿ ಸ್ಕೀಮ್! ಮೋಸ ಹೋಗಬೇಡಿ!