Select Your Language

Notifications

webdunia
webdunia
webdunia
webdunia

ಒಮಿಕ್ರಾನ್: ಮೈಲ್ಡ್ ಆಗಿದೆ, ಆದರೂ ವೈಲ್ಡ್ ಆಗಿದೆ

ಒಮಿಕ್ರಾನ್: ಮೈಲ್ಡ್ ಆಗಿದೆ, ಆದರೂ ವೈಲ್ಡ್ ಆಗಿದೆ
bangalore , ಗುರುವಾರ, 30 ಡಿಸೆಂಬರ್ 2021 (20:51 IST)
webdunia
ಸಂಖ್ಯೆ ಲೆಕ್ಕವನ್ನೇ ತೆಗೆದುಕೊಂಡರೆ ಕೊರೋನಾದ ರೂಪಾಂತರಿ ಒಮಿಕ್ರಾನ್ ಪಾಶ್ಚಾತ್ಯ ದೇಶಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಎಂಬುದು ಉತ್ಪ್ರೇಕ್ಷೆ ಏನಲ್ಲ. ಆದರೆ, ವೈರಸ್ ಮತ್ತು ಮನುಷ್ಯ ಇಬ್ಬರೂ ಈ ಹಂತದಲ್ಲಿ ಸಹಜೀವನ ಮಾಡಲು ಕಲಿತರಾ ಎಂಬಂಥ ಸ್ಥಿತಿ ಈಗ ಇದೆ. ಅಂದರೆ, ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ದಾಟಿಕೊಂಡು ವೈರಸ್ ತನ್ನ ಬದುಕು ಕಟ್ಟಿಕೊಳ್ಳುತ್ತಿದೆಯಾದರೂ ತಾನು ಹೊಕ್ಕ ದೇಹವನ್ನು ಸಾವಿನ ಮನೆಗೆ ನೂಕುವಷ್ಟರಮಟ್ಟಿಗಿನ ಪ್ರಭಾವವನ್ನು ಕಳೆದುಕೊಂಡಂತೆ ತೋರುತ್ತಿದೆ.
ಆದರೆ, ಸೋಂಕಿನ ಸೌಮ್ಯ ಸ್ವಭಾವವು ತೀವ್ರವಾಗಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಈ ವಾರದ ಪ್ರಾರಂಭದಲ್ಲಿ ಅಂದರೆ ಸೋಮವಾರ ಅಮೆರಿಕದಲ್ಲಿ 4,40,000 ಕೋವಿಡ್ ಪ್ರಕರಣಗಳು ವರದಿಯಾದರೆ, ಇಂಗ್ಲೆಂಡಿನಲ್ಲಿ 1,83,000 ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್, ಇಟಲಿ, ಪೋರ್ಚುಗಲ್ನಲ್ಲಿ ದಿನನಿತ್ಯದ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ಯಾಂಗಳ ನೀರು ಇಳಿಕೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ