Select Your Language

Notifications

webdunia
webdunia
webdunia
webdunia

ಓಮಿಕ್ರಾನ್ ಆತಂಕ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಓಮಿಕ್ರಾನ್ ಆತಂಕ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ
bangalore , ಭಾನುವಾರ, 12 ಡಿಸೆಂಬರ್ 2021 (19:28 IST)
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಭೀತಿ ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಗೆ ಅನುಸರಿಸಬೇಕಾದ ನಿಯಮಗಳ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಮೈಲ್ಡ್ ೋಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಲು ಅನುಸರಿಬೇಕಾದ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಕ್ಲಿನಿಕಲ್ ‌ಎಕ್ಸ್ ಪರ್ಟ್ ಕಮಿಟಿ ಓಮಿಕ್ರಾನ್ ವೈರಸ್ ರೋಗಿಗೆ ಡಿಸ್ಜಾರ್ಜ್ ಹೇಗೆ, ಯಾವಾಗ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ ಅಂದರೆ 10 ದಿನಕ್ಕೆ ಡಿಸ್ಜಾರ್ಜ್ ಮಾಡಬಹುದು ಎಂದು ತಿಳಿಸಲಾಗಿದೆ. ಆದರೆ ಇದಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗಿದೆ.
ಡಿಸ್ಜಾರ್ಜ್ ಆಗುವ ಮುನ್ನ ಮೂರು ದಿನದಲ್ಲಿ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣ ಇರಬಾರದು. ಯಾವುದೇ ಆಮ್ಲಜನಕ ಬೆಂಬಲ ಇಲ್ಲದೇ 4 ದಿನಗಳ ಕಾಲ 95% ಆಮ್ಲಜನಕ ಮಟ್ಟ ಇದ್ದರೆ ಡಿಸ್ಜಾರ್ಜ್ ಮಾಡಬಹುದು. ಡಿಸ್ಜಾರ್ಜ್ ಆದ ಮೇಲೆ ರೋಗ ಲಕ್ಷಣ ಕಂಡು ಬಂದರೆ ಏನು ಮಾಡಬೇಕು, ಯಾವುದನ್ನು ತೆಗೆದುಕೊಳ್ಳಬೇಕು ಎಂಬುದ ಬಗ್ಗೆ ಸಲಹೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಅಲ್ಲದೇ ಓಮಿಕ್ರಾನ್ ರೋಗಿಗೆ ಡಿಸ್ಚಾರ್ಜ್ ಮಾಡಬೇಕಾದರೆ ಎರಡು ಬಾರಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿದ ನಂತರ ನೆಗೆಟಿವ್ ವರದಿ ಬಂದಿದ್ದರೆ ಮಾತ್ರ ಡಿಸ್ಚಾರ್ಜ್ ಮಾಡಬೇಕು. ಒಂದು ವೇಳೆ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ 48 ಗಂಟೆಗಳ ಬಳಿಕ ಮತ್ತೆ ಸ್ವಾಬ್ ಕಲೆಕ್ಟ್ ಮಾಡಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಬೇಕು ಎಂದು ಸೂಚಿಸಲಾಗಿದೆ.
ಡಿಸ್ಸಾರ್ಜ್ ಆದ ವ್ಯಕ್ತಿಗೆ ಹೊಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಬೇಕು. ಮನೆ ಪ್ರತ್ಯೇಕಯಲ್ಲಿ ಇರುವ ವ್ಯಕ್ತಿಗೆ ಮತ್ತೆ 6ನೇ ದಿನಕ್ಕೆ ಆರ್‌ಟಿ-ಪಿಸಿಆರ್‌ ಟೆಸ್ಟ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ. ಓಮಿಕ್ರಾನ್ ನಿಯಂತ್ರಿಸಲು ಹಾಗೂ ರೋಗಿಗಳನ್ನು ಹೇಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಇಲಾಖೆ ರೂಪಿಸಿದ ನಿಯಮಗಳು ರಾಜ್ಯದಲ್ಲಿ ಸರಿಯಾಗಿ ಪಾಲನೆಯಾದಲ್ಲಿ ಓಮಿಕ್ರಾನ್ ಹರಡುವಿಕೆ ತಡೆಯುವುದು ಸಾಧ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ: ಒಂದೇ ತಿಂಗಳಲ್ಲಿ 4.26 ಲಕ್ಷ ರೂ. ದಂಡ ಸಂಗ್ರಹ, ಪುರುಷ ಪ್ರಯಾಣಿಕರಿಂದಲೂ ವಸೂಲಿ