ಸ್ವಪಕ್ಷದವರೊಂದಿಗೆ ಓಲೆಕಾರ್ ಮುನಿಸು​​​

Webdunia
ಶನಿವಾರ, 20 ಆಗಸ್ಟ್ 2022 (17:42 IST)
ಸ್ವಪಕ್ಷದ ನಾಯಕರ ಮೇಲೆ ಓಲೆಕಾರ್ ತಿರುಗಿ ಬಿದ್ದಿದ್ದು, ಸಿಎಂ ಬಸವರಾಜ ಬೊಮ್ಮಾಯಿಗೆ ಕಪ್ಪುಬಟ್ಟೆ ಪ್ರದರ್ಶನದ ಎಚ್ಚರಿಕೆಯನ್ನು ನೀಡಿದ್ದಾರೆ. ನಾಳೆ ಹಾವೇರಿಯಲ್ಲಿ ವಕೀಲರ ಸಂಘದ ಕಚೇರಿ ಉದ್ಘಾಟನಾ ಸಮಾರಂಭ ನಡೆಸಲಾಗ್ತಿದೆ. ಸ್ಥಳೀಯ ಶಾಸಕರನ್ನು ನಿರ್ಲಕ್ಷ್ಯ ಮಾಡಿ ಕೇವಲ ಕೆಲವು ಜನರ ಹೆಸರು ಹಾಕಿ ಕಾರ್ಯಕ್ರಮ ಮಾಡ್ತಿದ್ದಾರೆ, ಇದು ದುರಂತದ ಸಂಗತಿ ಎಂದು ಶಾಸಕ ನೆಹರೂ ಓಲೆಕಾರ್ ಹೇಳಿದ್ರು. ಹಾವೇರಿಯಲ್ಲಿ ಮಾತನಾಡಿದ ಅವರು, ದಿವಂಗತ ಸಿ.ಎಂ ಉದಾಸಿಯವರು ಇದ್ದ ಸಂದರ್ಭದಲ್ಲಿ ಹಾವೇರಿ ಕೋರ್ಟ್ ಕಟ್ಟಡ ವಿವಾದ ಬಗೆಹರಿಸಿ ಕಟ್ಟಡ ಕಟ್ಟಲು 25 ಕೋಟಿ ಮಂಜೂರು ಮಾಡಿದ್ದರು. ಆದರೆ ವಕೀಲರ ಸಂಘದ ಕಚೇರಿಗೆ ಅವಕಾಶ ಇರಲಿಲ್ಲ. ವಕೀಲರ ಸಂಘದ ಕಚೇರಿಗೆ ಸುಮಾರು ಏಳೂವರೆ ಕೋಟಿ ಮಂಜೂರು ಮಾಡಿಸಿದ್ದೆ. ಸ್ಥಳೀಯ ಶಾಸಕರನ್ನು ಕಡೆಗಣಿಸಿ ಉದ್ಘಾಟನಾ ಸಮಾರಂಭ ಇಟ್ಟುಕೊಂಡಿದ್ದಾರೆ. ಇದು ಅಕ್ಷ್ಯಮ್ಯ ಅಪರಾಧ ಎಂದು ಗುಡುಗಿದ್ರು. ನಾಳೆ ನಡೆಯುವ ಕಾರ್ಯಕ್ರಮದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಕಾರ್ಯಕರ್ತರು ವಿಷಾದ ವ್ಯಕ್ತಪಡಿಸಲಿದ್ದಾರೆ ಎಂದು ಅವರು ತಿಳಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಜಿತ್‌ ಕನಸು ಈಡೇರಿಸುತ್ತೀರೆಂಬ ನಂಬಿಕೆಯಿದೆ: ಸುನೇತ್ರಾಗೆ ಮೋದಿ ಶುಭಾಶಯ

ಮಮತಾ ಬ್ಯಾನರ್ಜಿ ವಂದೇ ಮಾತರಂಗೆ ವಿರೋಧಿಸುವುದಕ್ಕೆ ಇದೇ ಕಾರಣ ಎಂದ ಅಮಿತ್ ಶಾ

ಸಿಜೆ ರಾಯ್ ಆತ್ಮಹತ್ಯೆ ಪ‍್ರಕರಣ, ತನಿಖೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದ ಸುನೇತ್ರಾ ಪವಾರ್

ನಿಪಾ ವೈರಸ್ ತಗುಲಿದ್ದ ನರ್ಸ್‌ಗಳಿಬ್ಬರ ಸ್ಥಿತಿ ಈಗ ಹೇಗಿದೆ ಗೊತ್ತಾ

ಮುಂದಿನ ಸುದ್ದಿ
Show comments