Publish Date: Sun, 29 Jul 2018 (14:22 IST)
Updated Date: Sun, 29 Jul 2018 (14:26 IST)
ಕೇವಲ ವೇಸ್ಟ್ ಆಯಿಲ್ ಹಾಗೂ ಸುಟ್ಟ ಪೇಪರ್ ಸೇವಿಸಿಕೊಂಡು ಜೀವನ ನಡೆಸುತ್ತಾನಂತೆ ಈ ವ್ಯಕ್ತಿ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ತಾಲೂಕು ಕಚೇರಿ ಮಂಭಾಗ ಈ ವ್ಯಕ್ತಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಮೂಲದ ಕುಮಾರ್ ಈತ.
ಇನ್ನೂ ಬಾಲ್ಯದಲ್ಲಿ ಈತನನ್ನು ಇವರ ಪೋಷಕರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದರಂತೆ. ಅಂದಿನಿಂದ ಸ್ವತಃ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದನಂತೆ. ಇನ್ನೂ ತಾನೂ ಕೆಲಸ ಮಾಡುತ್ತಿದ್ದ ಮಾಲಿಕ ಕೂಲಿ ಕೊಡದೆ ಹೋದಾಗ, ಹಸಿವನ್ನು ತಾಳಲಾರದೆ ಸುಟ್ಟ ಪೇಪರ್ ತಿಂದು ನೀರು ಕುಡಿದನಂತೆ. ತದನಂತರ ಇದನ್ನ ತನ್ನ ಆಹಾರವನ್ನಾಗಿ ಮಾಡಿಕೊಂಡಿದ್ದಾನೆ.
ಈತನ ದೇಹ ಸ್ಥಿತಿ ವೈದ್ಯಕೀಯ ಲೋಕಕ್ಕೂ ಸವಾಲಾಗಿದೆ. ವೈದ್ಯರು ಈತನಿಗೆ ಚಿಕಿತ್ಸೆ ನೀಡಲಾಗದೆ, ನಿನ್ನ ದೇಹದಲ್ಲೆ ಎಲ್ಲವು ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಈತನನ್ನು ಕಂಡ ಸ್ಥಳೀಯರು ಅಚ್ಚರಿ ಹಾಗೂ ಕುತೂಹಲದಿಂದ ನೋಡತೊಡಗಿದರು. ಈ ರೀತಿಯ ವ್ಯಕ್ತಿಯನ್ನು ಇದೇ ಮೊದಲು ನೋಡುತ್ತಿರೋದು, ಈತನ ವರ್ತನೆ ಅಚ್ಚರಿಯಾಗಿದೆ ಅಂತಾರೆ ಸ್ಥಳೀಯರು.