Publish Date: Sun, 18 Nov 2018 (14:33 IST)
Updated Date: Sun, 18 Nov 2018 (14:36 IST)
ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕಿದ್ದ ಸಾಮಾನ್ಯ ಸಭೆ ಅಧಿಕಾರಿಗಳೇ ಚಕ್ಕರ್ ಹೊಡೆದಿದ್ದರು. ಅಧಿಕಾರಿಗಳ ನಡೆ ಕಂಡು ಅಧ್ಯಕ್ಷ ಗರಂ ಆದ ಘಟನೆ ನಡೆದಿದೆ.
ಸಾಮಾನ್ಯ ಸಭೆಗೆ ಚಕ್ಕರ್ ಹೊಡೆಯುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದೆಂದು ಗುಂಡ್ಲುಪೇಟೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜಗದೀಶ್ ಮೂರ್ತಿ ಖಡಕ್ಕಾಗಿ ಎಚ್ಚರಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಜಗದೀಶ್ ಮೂರ್ತಿ ಕೆಂಡಾಮಂಡಲರಾದರು.
ಇಲಾಖಾವಾರು ಅನುಪಾಲಾನಾ ವರದಿ ಮಂಡಿಸಿದ ಸಂದರ್ಭದಲ್ಲಿ ಸಭೆಗೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್ ನೀಡಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸಭೆಯಲ್ಲೇ ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ನಡೆಸುವ ಸಭೆಗಳಿಗೆ ಸಂಬಂಧಿಸಿದ ಕೆಲ ಇಲಾಖಾಧಿಕಾರಿಗಳು ಪದೇ ಪದೇ ಗೈರಾಗುವ ಚಾಳಿ ಮುಂದುವರೆಸಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.