Webdunia - Bharat's app for daily news and videos

Install App

ದೆವ್ವವಾಗಿ ಕಾಡ್ತೀನಿ: ಅನುಪಮಾ ಶೆಣೈ

Webdunia
ಬುಧವಾರ, 8 ಜೂನ್ 2016 (09:25 IST)
ಮೂರು ದಿನಗಳ ಹಿಂದೆ ವಯಕ್ತಿಕ ಕಾರಣ ನೀಡಿ ನಾಲ್ಕು ಸಾಲಿನ ರಾಜೀನಾಮೆ ಬರೆದಿಟ್ಟು ಹೋಗಿದ್ದ ಅನುಪಮಾ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಫೇಸ್‌ಬುಕ್ ಸಮರ ಇಂದು ಕೂಡ ಮುಂದುವರೆದಿದೆ. 

ನಿನ್ನೆಯಷ್ಟೇ ಪರಮೇಶಿ ಪ್ರೇಮ ಪ್ರಸಂಗದ ಸಿಡಿ ಬಿಡುಗಡೆ ಮಾಡ್ತೀನಿ ಎಂದು ಸ್ಟೇಟಸ್ ಹಾಕಿದ್ದ ಅವರು ಇಂದು *CD ಬಿಡುಗಡೆ ಮಾಡ್ತೀನಿ ಅಂದ್ರೆ ಕೊಲೆ ಬೆದರಿಕೆ ಹಾಕ್ತೀರಾ?! ದೆವ್ವವಾಗಿ ಬಂದು ಕಾಡ್ತೀನಿ* ಎಂದು ಎಚ್ಚರಿಕೆ ನೀಡಿದ್ದಾರೆ.
 
ಜತೆಗೆ ತಮಗೆ ಬೆಂಬಲ ವ್ಯಕ್ತ ಪಡಿಸಿದ ಡಿಐಜಿ ಅವರಿಗೆ ಧನ್ಯವಾದಗಳನ್ನರ್ಪಿಸಿ ಅವರು ಹಾಕಿರುವ ಸ್ಟೇಟಸ್ ಹೀಗಿದೆ-
*ಧನ್ಯವಾದಗಳು ರೂಪಾ ಮೇಡಮ್. ಈ ಇಲಾಖೆಯಲ್ಲಿ ಧೈರ್ಯ ಅನ್ನೋದು ಕೇವಲ ಹೆಂಗಸರಿಗೆ ಮಾತ್ರ ಇರೋದೇನೊ. ಮಹಿಳೆಯಾಗಿ ನಾವಿಬ್ಬರೂ ಅನುಭವಿಸಿರುವ ನೋವು ಒಂದೇ. ಆದರೆ ಅಧಿಕಾರಿಗಳಾಗಿ ವ್ಯತಾಸವಿದೆ. ನೀವು IPS, ನಾನು ಬಡಾಪಾಯಿ KSPS.
‪#‎ಬೃಹನ್ನಳೆಯರು‬.*
 
ಅಷ್ಟೇ ಅಲ್ಲದೆ ತಮ್ಮ ಹೋರಾಟಕ್ಕೆ ದನಿಯಾಗಿ, ಅದನ್ನು ಹಾದರವಾಗಿಸದಿರಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿ ಮತ್ತೊಂದು ಪೋಸ್ಟ್‌ನ್ನು ಅವರು ಪ್ರಕಟಿಸಿದ್ದಾರೆ. 
 
*ಮಾಧ್ಯಮ ಮಿತ್ರರೇ, ಜನದನಿಯಾಗಿರಿ. TRPಗಾಗಿ ನನ್ನ ಹೋರಾಟವನ್ನು ಹಾದರವಾಗಿಸದಿರಿ. ನನ್ನ ದನಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ. ನನ್ನ ಈ ಹೋರಾಟದ ಕಥೆಯಲ್ಲಿ ಜನ ಹೀರೋ ಆಗಬೇಕು.
‪#‎ನ್ಯೂಸೂ‬......
‪#‎Pressti‬.......*
 
ರಾಜೀನಾಮೆ ನೀಡಿದ ದಿನದಿಂದ ಈವರೆಗೆ ಅನುಪಮಾ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ಎಕ್ಟಿವ್ ಆಗಿರುವ ಅವರು ಒಂದರ ಹಿಂದೆ ಒಂದು ಪೋಸ್ಟಿಂಗ್, ಸ್ಟೇಟಸ್ ಪ್ರಕಟಿಸುವುದರ ಮೂಲಕ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

India, Pakistan: ಉದ್ವಿಗ್ನತೆ ಮಧ್ಯೆಯೂ ಪಾಕ್‌ ವಶದಲ್ಲಿದ್ದ ಬಿಎಸ್‌ಎಫ್‌ ಯೋಧ ಭಾರತಕ್ಕೆ, ಕೇಂದ್ರದ ನಡೆಗೆ ಮೆಚ್ಚುಗೆ

ಮುಂದಿನ ಸುದ್ದಿ
Show comments