ಟೋಕಿಯೋದಲ್ಲಿ ಮೃಗಾಲಯವೊಂದರಲ್ಲಿ ಈ ಸೆರೆಯಾಗಿರುವ ಈ ವಿಡಿಯೋ ಯಾರನ್ನು ಕೂಡ ಒಮ್ಮೆ ಬೆಚ್ಚಿ ಬೀಳಿಸುವಂತಿದೆ. ಆದರೆ ಕೊನೆಯಲ್ಲಿ ಎಲ್ಲವೂ ಸುಂಖಾತ್ಯವಾಗಿದೆ. ಪೋಷಕರೊಂದಿಗೆ ಮೃಗಾಲಯಕ್ಕೆ ತೆರಳಿದ್ದ 2 ವರ್ಷದ ಮಗುವಿನ ಮೇಲೆ ಸಿಂಹವೊಂದು ದಾಳಿ ಮಾಡಿದೆ! ಆದರೆ ಮಗು ಬದುಕುಳಿದಿದೆ. ಅದು ಹೇಗೆ?
ಹಾಲುಗಲ್ಲದ ಕಂದ ಮೃಗಾಲಯದಲ್ಲಿ ಸಿಂಹವನ್ನು ನೋಡುತ್ತಿತ್ತು. ಮಗುವನ್ನು ನೋಡಿದ ಸಿಂಹ ಅದರ ಮೇಲೆ ಗುರಿ ಇಟ್ಟಿದೆ. ಮಗು ತನ್ನೆಡೆಗೆ ಬೆನ್ನು ಮಾಡುತ್ತಿದ್ದಂತೆ ಸಿಂಹ ಅದರ ಮೇಲೆ ಎರಗಿದೆ. ಏನಾಗುತ್ತಿದೆ ಎಂದು ತಿರುಗಿ ನೋಡಿದ ಮಗು ಭಯದಿಂದ ಅಲ್ಲಿಂದ ಸರಿದಿದೆ. ಅಷ್ಟಕ್ಕೂ ಆ ಮಗುವಿಗೆ ಏನೂ ಅಪಾಯವಿಲ್ಲ ಹೇಗೆ? ಸಿಂಹ ಮತ್ತು ಮಗುವಿನ ಮಧ್ಯೆ ಇದ್ದ ಗಾಜು ಮಗುವನ್ನು ಕ್ರೂರ ಪ್ರಾಣಿ ಬಾಯಿಯಿಂದ ರಕ್ಷಿಸಿದೆ.
ಮೃಗಾಲಯದಲ್ಲಿ ಗಾಜಿನಗೋಡೆ ಇದ್ದು ಅದರ ಮೂಲಕವೇ ವೀಕ್ಷಕರು ಪ್ರಾಣಿಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಅತಿ ಹತ್ತಿರದಿಂದ ಪ್ರಾಣಿಗಳನ್ನು ನೋಡಲು ಅನುಕೂಲವಾಗುತ್ತಿದೆ.
ಈ ದೃಶ್ಯಾವಳಿ ಈಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.