Select Your Language

Notifications

webdunia
webdunia
webdunia
webdunia

ಕರ್ನಾಟಕ ಭವನ ನಿರ್ಮಾಣಕ್ಕೆ ಆಕ್ಷೇಪ

ಕರ್ನಾಟಕ ಭವನ ನಿರ್ಮಾಣಕ್ಕೆ ಆಕ್ಷೇಪ
ಮಹಾರಾಷ್ಟ್ರ , ಶನಿವಾರ, 15 ಅಕ್ಟೋಬರ್ 2022 (15:38 IST)
ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ಬಣದ ಉದ್ಧಟತನ ಮೀರಿ ಹೋಗಿದೆ.ಕೊಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಸೇನೆ ಮುಖಂಡರು ಕನ್ನಡ ಭವನ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು.ಕನ್ನೇರಿ ಸಿದ್ದಗಿರಿ ಮಠದ ಕಾರ್ಯಕ್ರಮದಲ್ಲಿ ಕರ್ನಾಟಕ ಭವನ ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದರು.ಈ ಹೇಳಿಕೆ ವಿರುದ್ದ ಠಾಕ್ರೆ ಬಣದ ಶಿವಸೇನೆ ಠಾಕ್ರೆ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟದಲ್ಲಿ ಸಾಕಷ್ಟು ನಮ್ಮ ಜನರು ಮೃತರಾಗಿದ್ದಾರೆ. ಆದ್ರೆ ಅವರಿಗೆ ನ್ಯಾಯ ಕೊಡಿಸುವಂತಹ ಕೆಲಸ ಕರ್ನಾಟಕದಿಂದ ಆಗಿಲ್ಲ. ಈಗ ಕರ್ನಾಟಕ ಸಿಎಂ ಮಹಾರಾಷ್ಟ್ರದಲ್ಲಿ ಬಂದು ಕರ್ನಾಟಕ ಭವನ ಕಟ್ಟಿದ್ರೆ,ನಮಗೂ ಅವರು ಕರ್ನಾಟಕದಲ್ಲಿ ಮಹಾರಾಷ್ಟ್ರ ಭವನ ಕಟ್ಟಲು ಅವಕಾಶ ನೀಡಬೇಕು, ಮೊದಲು ನೀವು ನಮಗೆ ಭವನ ಕಟ್ಟಲು ಅವಕಾಶ  ನೀಡಿ ಆಮೇಲೆ ನಿಮ್ಮ ಭವನ ಇಲ್ಲಿ ಕಟ್ಟಿ, ಒಂದು ವೇಳೆ ನೀವು ಕರ್ನಾಟಕ ಭವನ ಕಟ್ಟಿದ್ದೆ ಆದ್ರೆ ನಾವು ಕರ್ನಾಟಕ ಎಂಬ ಹೆಸರು ತೆಗೆದು ಹಾಕುತ್ತೇವೆ ಅಂತ ಕರ್ನಾಟಕದ ಸಿಎಂಗೆ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ರವಿಕಿರಣ ಇಂಗವಳ್ಳಿ ಎಚ್ಚರಿಕೆ ಕೊಟ್ರು.

Share this Story:

Follow Webdunia kannada

ಮುಂದಿನ ಸುದ್ದಿ

2024ರೊಳಗೆ ರಾಮಮಂದಿರ ನಿರ್ಮಾಣ