Publish Date: Tue, 03 Oct 2017 (19:12 IST)
Updated Date: Tue, 03 Oct 2017 (19:19 IST)
ಮಾಜಿ ಸಚಿವ, ಬಿಜೆಪಿ ಮುಖಂಡ ಕರುಣಾಕರ್ ರೆಡ್ಡಿ ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ
ಜಿಲ್ಲೆಯ ಸಿರಗುಪ್ಪಾ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ, ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಕರುಣಾಕರ್ ರೆಡ್ಡಿಯವರಿಗೆ ಮತ ಹಾಕುತ್ತೇವೆ ಎಂದು ಪ್ರಮಾಣ ಮಾಡಿ ಎಂದು ಫರ್ಮಾನ್ ಹೊರಡಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮಗೆ ಮತದಾರರು ಮೊದಲು ಆಶೀರ್ವದಿಸಿದಂತೆ ಮತ್ತೆ ಆಶೀರ್ವದಿಸಬೇಕು ಎಂದು ಕೋರಿದರು.
ಸಮಾವೇಶದಲ್ಲಿ ರೆಡ್ಡಿ ಬೆಂಬಲಿಗರು, ಸಮಾವೇಶಕ್ಕೆ ಆಗಮಿಸಿದ್ದವರಿಗೆ ರೆಡ್ಡಿಯವರಿಗೆ ಮತ ಹಾಕುತ್ತೇವೆ ಎಂದು ಪ್ರಮಾಣ ಮಾಡಿ ಭರವಸೆ ಕೊಡಿ ಎಂದು ಮನವಿ ಮಾಡಿದರು. ಆಣೆ ಪ್ರಮಾಣ ಮಾಡಿದ ನಂತರ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.