ರಾಜ್ಯದಲ್ಲಿ ಈಗಾಗಲೇ ಮಸೀದಿಗಳಲ್ಲಿ ಅಜಾನ್ ಕೂಗೋದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಹಲವು ಮಸೀದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಇದೀಗ ಜನವಸತಿ ಪ್ರದೇಶದಲ್ಲಿ ಪೂಜೆ ವೇಳೆ ಜಾಸ್ತಿ ಸೌಂಡ್ ಮಾಡಿದ್ದಕ್ಕಾಗಿ ಪೊಲೀಸರು ದೇಗುಲಕ್ಕೂ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಜನರು ಮೌಖಿಕವಾಗಿ ದೂರು ನೀಡಿದ್ದರಿಂದಾಗಿ ಠಾಣಾ ವ್ಯಾಪ್ತಿಯಲ್ಲಿನ ವೇಣುಗೋಪಾಲಸ್ವಾಮಿ ದೇಗುಲಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ನಲ್ಲಿ, ಪೂಜೆ ವೇಳೆ ಜೋರಾದ ಶಬ್ದದಿಂದ ಜನರಿಗೆ ತೊಂದರೆಯಾಗುತ್ತಿದೆ. ಪೂಜೆ ಸಂದರ್ಭದಲ್ಲಿ ಜನವಸತಿ ಪ್ರದೇಶದಲ್ಲಿ ಲೌಡ್ ಸೌಂಡ್ ಕಾರಣಕ್ಕೆ ಮಕ್ಕಳು, ಹಿರಿಯ ನಾಗರೀಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಓ ಅರವಿಂದ ಬಾಬುಗೆ ನೋಟಿಸ್ ಜಾರಿಗೊಳಿಸಲಾಗಿದೆ.