Publish Date: Mon, 19 Feb 2018 (14:59 IST)
Updated Date: Mon, 19 Feb 2018 (15:04 IST)
ಮುಸ್ಲಿಂ ಸಮುದಾಯ ಮತಗಳಿಗಾಗಿ ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕ ಆಳಿದ ನಿಜಾಮರ ಉತ್ಸವ ಆಚರಣೆ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತಗಳಿಗಾಗಿ ಟಿಪ್ಪು ಸುಲ್ತಾನ್ ಹಾಗೂ ಬಹುಮನಿ ಸುಲ್ತಾನ್ ಉತ್ಸವ ಆಚರಣೆ ಮಾಡುತ್ತಿದೆ. ಮುಂದೆ ನಿಜಾಮರ ಉತ್ಸವ ಕೂಡ ಮಾಡಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರದ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಆದರೆ, ಇವರಿಗೆ ಮತಾಂಧರ ಜಯಂತಿಯೇ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.