ಬೆಂಗಳೂರು-ಇಂದು ನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ರಾಜ್ಯಸಭಾ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸುತ್ತೇವೆ.ಪಕ್ಷದ ಎಲ್ಲಾ ಶಾಸಕರು ಹಾಜರಿರಬೇಕು.ಇನ್ನೊಂದೆರಡು ಘಂಟೆಯೊಳಗೆ ಅಭ್ಯರ್ಥಿಗಳ ಹೆಸರು ತೀರ್ಮಾನ ಮಾಡಲಾಗುತ್ತೆ.ಅಭ್ಯರ್ಥಿಗಳ ಹೆಸರನ್ನ ನಾವು ಶಿಫಾರಸ್ಸು ಮಾಡಿದ್ದೇವೆ, ಅವರು ಹೇಳ್ತಾರೆ.ಅಂತಿಮವಾಗಿ ಅವರು ಫೈನಲ್ ಮಾಡ್ತಾರೆ.ಇವತ್ತು ನಾನು ಸಿಎಂ ಒಂದು ಘಂಟೆ ಚರ್ಚೆ ಮಾಡಿದ್ದೀವಿ ಎಂದು ಕೆಪಿಸಿಸಿ ಕಛೇರಿಯಲ್ಲಿ ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ
ಯಾವುದೇ ಕ್ಷೇತ್ರದಲ್ಲೂ ಸಿಂಗಲ್ ನೇಮ್ ಆಗಿಲ್ಲ.ನಮ್ಮ ಸರ್ವೆ ಟೀಂ ಕೊಟ್ಟ ಲಿಸ್ಟ್ ಆಧಾರದ ಮೇಲೆ ಚರ್ಚೆ ಮಾಡಿದ್ದೀವಿ ಅಷ್ಟೇ ಎಂದು ಹೇಳಿದ್ದಾರೆ.ಇನ್ನೂ AICC ಗೆ ಕಳಿಸಿದ ಪಟ್ಟಿ ಸಮರ್ಪಕವಾಗಿಲ್ಲ ಎಂಬ ವಿಚಾರವಾಗಿ ಅವೆಲ್ಲ ಸುಳ್ಳು ಯಾವ ಪಟ್ಟಿನೂ ಇಲ್ಲ, ಯಾವ AICC ಗೂ ಕಳಿಸಿಲ್ಲ.ನಾನು ಸಿಎಂ ಗೆ ಇವತ್ತು ಅಫಿಶಿಯಲ್ ಕಾಫಿ ಕೊಟ್ಟೆ, ಸರ್ವೆ ರಿಪೋರ್ಟ್ ಕಾನ್ಪಿಡೆನ್ಷಿಯಲ್ ಆಗಿರಬೇಕು.
ಇನ್ನೂ ಸಚಿವರ ಸ್ಪರ್ಧೆ ವಿಚಾರವಾಗಿ ರಾಜಕೀಯದಲ್ಲಿ ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು, ಪಕ್ಷ ತೀರ್ಮಾನ ಮಾಡುತ್ತೆ, ಗೆಲುವಿನ ಮಾನದಂಡ ಮಾತ್ರ ಮುಖ್ಯ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.