Select Your Language

Notifications

webdunia
webdunia
webdunia
webdunia

ಕಾವೇರಿಗೆ ಬಾಗಿನ ಅರ್ಪಿಸಿ ಬಾಡೂಟ: ಹೊಸ ವಿವಾದ

KRS Dam

Krishnaveni K

ಮೈಸೂರು , ಸೋಮವಾರ, 29 ಜುಲೈ 2024 (16:56 IST)
ಮೈಸೂರು: ಕೆಆರ್ ಎಸ್ ಗೆ ಬಾಗಿನ ಅರ್ಪಿಸಿದ ಬಳಿಕ ಸಾಮಾನ್ಯವಾಗಿ ಸಿಹಿ ಊಟ ಆಯೋಜಿಸುವುದು ಪದ್ಧತಿ. ಆದರೆ ಈ ಬಾರಿ ಬಾಗಿನ ಅರ್ಪಿಸುವ ಕಾರ್ಯಕ್ರಮದ ಬಳಿಕ ಬಾಡೂಟ ಆಯೋಜಿಸಿ ವಿವಾದವಾಗಿದೆ.

ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆ ಶಿವಕುಮಾರ್ ಕೆಆರ್ ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಾಂಪ್ರದಾಯಿಕವಾಗಿ ಬಾಗಿನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು.

ಬಳಿಕ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಿತು. ಆದರೆ ಅದಾದ ಬಳಿಕ ಅಧಿಕಾರಿಗಳು ಬಾಡೂಟ ಆಯೋಜಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿಹಿ ಊಟ ಆಯೋಜಿಸಲಾಗುತ್ತದೆ. ಆದರೆ ಬಾಡೂಟ ಏರ್ಪಡಿಸಿ ಸಂಪ್ರದಾಯ ಮುರಿದ ಅಧಿಕಾರಿಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸದಸ್ಯರು ಸ್ಥಳದಿಂದ ತೆರಳಿದ ಬಳಿಕ ಅಧಿಕಾರಿಗಳಿಂದ ಈ ಬಾಡೂಟ ಆಯೋಜನೆಯಾಗಿದೆ. ಇಲ್ಲದೇ ಹೋಗಿದ್ದರೆ ಸಿಎಂ ಕೂಡಾ ವಿವಾದಕ್ಕೆ ಸಿಲುಕುವ ಸಾಧ್ಯತೆಯಿತ್ತು. ಆದರೆ ಇದೀಗ ಸಂಪ್ರದಾಯ ಮುರಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ದೇಶ ವಿಭಜನೆ ಮಾತನಾಡಿದ ಡಿಕೆ ಸುರೇಶ್