ತಜ್ಞರು, ಅಧಿಕಾರಿಗಳು ನೈಟ್ ಕರ್ಪ್ಯೂ ಮುಂದುವರೆಸುವ ಬಗ್ಗೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು, ವೀಕೆಂಡ್ ಕರ್ಫ್ಯೂ ತೆಗೆಯುವುದರ ಬಗ್ಗೆ ಒಮ್ಮತ ವ್ಯಕ್ತಪಡಿಸಿದರು. ಕೊವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ 50: 50 ನಿಯಮ ರೂಪಿಸಿ. ಯೂರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಕೋವಿಡ್ ಮೂರನೇ ಅಲೆಯ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ, ಮತ್ತೆ ಬಿಗಿಕ್ರಮ ಮುಂದುವರಿಸೋಣ. ಸದ್ಯ ವೀಕೆಂಡ್ ಕರ್ಫ್ಯೂ ತೆರವು ಮಾಡೋಣ ಎಂಬ ಕೆಲ ಸಚಿವರ ಸಲಹೆಗೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು
ಸಭೆಯಲ್ಲಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ಕೊಡುವಂತೆ ಶಿಕ್ಷಣ ಸಚಿವರು ಮನವಿ ಮಾಡಿದರು. ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನಲೆ ಬೆಂಗಳೂರು ಸೇರಿದಂತೆ ಕೆಲ ಮಹಾನಗರಗಳಲ್ಲಿ 1ರಿಂದ 9 ನೇ ತರಗತಿಗಳು ಮುಚ್ಚಲಾಗಿದೆ. ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚು ಬಾಧಿಸುತ್ತಿಲ್ಲ. ಜನವರಿ ಪ್ರಾರಂಭದಿಂದ ಇಲ್ಲಿವರೆಗೆ 7 ಸಾವಿರ ಮಕ್ಕಳಿಗೆ ಮಾತ್ರ ಸೋಂಕು ಬಂದಿದೆ. ಆದರೆ, ಸೋಂಕು ಬಂದವರಲ್ಲಿ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಆಗಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಕ್ಕೆ ಅವಕಾಶ ಕೊಡುವಂತೆ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿಷಯ ಪ್ರಸ್ತಾಪಿಸಿದರು.