ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಬೇಕಾಗಿದ್ದ ಸರ್ಕಾರ ಈಗ ಆ ಯೋಜನೆಗೆ ತಡೆ ನೀಡಿದೆ. ಕರ್ನಾಟಕದಲ್ಲಿ ಸದ್ಯಕ್ಕೆ 18-44 ವರ್ಷದವರೆಗಿನ ಜನರಿಗೆ ಲಸಿಕೆ ನೀಡಲಾಗುವುದಿಲ್ಲ.
ಮುಂದಿನ ಆದೇಶದವರೆಗೂ ಈ ವಯೋಮಾನದವರಿಗೆ ಲಸಿಕೆ ವಿತರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಲಸಿಕೆ ನೀಡುವುದಕ್ಕೆ ತಡೆಯಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದ ಹೊರತಾಗಿಯೂ ರಾಜ್ಯ ಸರ್ಕಾರ ಲಸಿಕೆ ಅಭಾವದ ನೆಪ ಹೇಳಿ ತಡೆ ನೀಡಿದೆ. 45 ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಲಸಿಕೆ ಪೂರೈಸುತ್ತಿದೆ. ಅದು ಜಾರಿಯಲ್ಲಿರಲಿದೆ. ಆದರೆ 18 ವರ್ಷ ಮೇಲ್ಪಟ್ಟವರಿಗೆ ಈಗ ಸದ್ಯಕ್ಕೆ ಲಸಿಕೆ ನೀಡಲಾಗದು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರದಲ್ಲೂ ಇದೇ ಕಾರಣಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತಗೊಳಿಸಲಾಗಿದೆ.