Select Your Language

Notifications

webdunia
webdunia
webdunia
webdunia

ಭಾರತ್ ಬಂದ್‌ಗೆ ಯಾವುದೇ ಬೆಂಬಲವಿಲ್ಲ: ಪಿ ಸಿ ರಾವ್

ಭಾರತ್ ಬಂದ್‌ಗೆ ಯಾವುದೇ  ಬೆಂಬಲವಿಲ್ಲ: ಪಿ ಸಿ ರಾವ್
bangalore , ಶುಕ್ರವಾರ, 24 ಸೆಪ್ಟಂಬರ್ 2021 (21:12 IST)
ಬೆಂಗಳೂರು: ಇದೇ  ಸೆಪ್ಟೆಂಬರ್ ತಿಂಗಳ 27 ನೇ ತಾರೀಖು, ಸೋಮವಾರದಂದು ಕರೆದಿರುವ ಭಾರತ್ ಬಂದ್‌ಗೆ ನಮ್ಮ ಬೆಂಗಳೂರು ಹೊಟೆಲ್ ಸಂಘವು ಯಾವುದೇ ಬೆಂಬಲ ನೀಡುವುದಿಲ್ಲ, ಎಲ್ಲಾ ಹೋಟೆಲ್‌ಗಳು ತೆರೆದಿರುತ್ತವೆ ಎಂದು ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ. 
 
ವಿಶೇಷವಾಗಿ ಹೋಟೆಲ್ ಉದ್ಯಮ ರೈತರು ಬೆಳೆಯುವ ತರಕಾರಿ, ಹಾಲು, ಹಣ್ಣು-ಹಂಪಲುಗಳು ಮುಂತಾದವುಗಳನ್ನು ಹೆಚ್ಚಿಗೆ ಖರೀದಿ ಮಾಡಿ ಪ್ರೋತ್ಸಾಹಿಸುತ್ತದೆ. ಹೀಗಿರುವಾಗ ಹೋಟೆಲುಗಳನ್ನು ಬಂದ್ ಮಾಡಿದರೆ ರೈತರಿಗೆ ನಷ್ಟವಾಗಲಿದೆ ಎಂದು ಅಭಿಪ್ರಯ ಪಟ್ಟಿದ್ದಾರೆ.
 
ಕೋವಿಡ್ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ತೊಂದರೆಗಳಾಗಿದೆ. ಈ ಕಾರಣದಿಂದ ನಮ್ಮ ಹೋಟೆಲ್ ಉದ್ಯಮ ಯಾವುದೇ ಬಂದ್‌ಗಳಿಗೆ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆ ವ್ಯಾಪ್ತಿಯ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ 847 ಕೋಟಿ ತೆರಿಗೆ ನಷ್ಟ