ಈಶ್ವರಪ್ಪ ರಾಜೀನಾಮೆ ಕೊಡೋದಿಲ್ಲ

Webdunia
ಶುಕ್ರವಾರ, 18 ಫೆಬ್ರವರಿ 2022 (14:36 IST)
ತಪ್ಪೇ ಮಾಡದ ಸಚಿವ ಈಶ್ವರಪ್ಪ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರು ರಾಷ್ಟ್ರಗೀತೆ ಕುರಿತು ಎಲ್ಲಿಯೂ ಅಪಮಾನ ಮಾಡಿಲ್ಲ.
ಅಗೌರವನ್ನು ತೋರಿಸುವಂತಹ ಏನೂ ಮಾಡಿಲ್ಲ. ಅವರು ಏಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ರಾಷ್ಟ್ರಗೀತೆ ಬಗ್ಗೆ ನಮಗೆ ಎಷ್ಟು ಗೌರವವಿದೆಯೋ ಕೇಸರಿ ಧ್ವಜಕ್ಕೂ ಅಷ್ಟೇ ಗೌರವವಿದೆ.
 
ಕೇಸರಿ ಶಾಂತಿ ಮತ್ತು ಸ್ಪೂರ್ತಿಯ ಸಂಕೇತ. ಈಶ್ವರಪ್ಪ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್‍ ನವರಿಗೆ ಗೊತ್ತಿರುವುದು ಕೇವಲ ಓಲೈಕೆ ರಾಜಕಾರಣ. ಒಂದು ಸಮುದಾಯವನ್ನು ಓಲೈಸಿಕೊಂಡು ಬಹುಸಂಖ್ಯಾತರನ್ನು ಕಡೆಗಣಿಸು ವುದೇ ಆ ಪಕ್ಷದ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು. ಇನ್ನೂ ವಿಧಾನಪರಿಷತ್ ಪ್ರತಿಪ್ರಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ದಬ್ಬಾ ಳಿಕೆಗೆ ನಾವು ಹೆದರುವುದಿಲ್ಲ. ಅವರು ಹೆದರಿಸಿದರೆ ಇಲ್ಲಿ ಯಾರು ಹೆದರುವವರು ಇಲ್ಲ. ವೈಯಕ್ತಿಕವಾಗಿ ದಾಳಿ ಮಾಡಿದರೆ ನಮ್ಮದು ಕೂಡ ಅದೇ ಶೈಲಿಯಲ್ಲೇ ಮಾತನಾಡಬೇಕಾಗುತ್ತದೆ ಎಂದು ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿಬರ್ತಿದೆ ಹೀಗೊಂದು ಸುದ್ದಿ

ದೇವಸ್ಥಾನಗಳಿಗೆ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ ಸಿಎಂ ಡಿಕೆ ಶಿವಕುಮಾರ್

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನೋಡುತ್ತಾ ಸಾಗುವ ಅಭ್ಯಾಸವಿದ್ದರೆ ಈ ಭೀಕರ ವಿಡಿಯೋ ನೋಡಿ Video

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ

ಮೊಮ್ಮಗ ಕೇಳೋದು ಹೆಚ್ಚೋ ತಾತ ಮಾಡಿಕೊಡೋದು ಹೆಚ್ಚಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಏನು ಮಾಡಿದ್ರು ನೋಡಿ Video

ಮುಂದಿನ ಸುದ್ದಿ
Show comments