Daily Horoscope

Select Your Language

Notifications

webdunia
webdunia
webdunia
webdunia

ಯಾರೂ ಮೂರ್ಖರು, ಇಂಧನ ಉಳಿಸಿ ಎಂದು ಹೇಳಿದ ಬೆನ್ನಲ್ಲೇ ರೋಡ್‌ ಶೋ ಮಾಡಿದ ಮೋದಿಯೋ: ಕೌಂಟರ್ ಕೊಟ್ಟ ನಟ ಕಿಶೋರ್‌

Actor Kishor
ಬೆಂಗಳೂರು: ದೇಶದ ಜನರು ಕಡಿಮೆ ಇಂಧನ ಬಳಕೆ ಮಾಡಿ, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಕೆ ಮಾಡಬೇಕು ಮತ್ತು ಚಿನ್ನ ಖರೀದಿಸಬಾರದು ಎಂದು ಹೇಳಿರುವ ವಿಚಾರ ತೀವ್ರ ಚರ್ಚೆ ನಡುವೆ ಕನ್ನಡ ನಟ ಕಿಶೋರ್ ಕೂಡಾ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. 

ಹೇಳಿಕೆ ಸಂಬಂಧ ಪ್ರಧಾನಿ ಮೋದಿಗೆ ಕೌಂಟರ್ ನೀಡಿದ್ದಾರೆ. 

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ಬಹುಭಾಷಾ ನಟ ಕಿಶೋರ್ ಅವರು, ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ನಮ್ಮನ್ನು ಇಂಧನ ಉಳಿಸಿ, ಕಡಿಮೆ ಖರ್ಚು ಮಾಡಿ, ಅದೇ ದೇಶಭಕ್ತಿ ಎಂದು ಹೇಳಿದ ಮರುದಿನವೇ ವಾಹನಗಳ
ದಂಡಿನೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುವ ಇವನೋ???(ಗಲ್ಫ್ ಯುದ್ಧ ಪ್ರಾರಂಭವಾದ ನಂತರದ ಕಳೆದ ಕೆಲವು ತಿಂಗಳುಗಳಲ್ಲಿ ಅವನು ಮಾಡಿದ ಚುನಾವಣಾ ರ್ಯಾಲಿಗಳನ್ನು ಮರೆಯಬಾರದು) ಅಥವಾ ಇವನ ಮಾತನ್ನು ನಂಬಿ, ಮತ ಹಾಕಿ ಇವನನ್ನು ಅಧಿಕಾರದಲ್ಲಿಡುವ ಜನರೋ??? ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ವರ್ಷಗಳಿಂದ ಜಗತ್ತು ನಿರಂತರವಾಗಿ ಅಸ್ಥಿರ ಪರಿಸ್ಥಿತಿಗಳ ಮೂಲಕ ಹಾದುಹೋಗುತ್ತಿದೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದಿಂದ ಸೃಷ್ಟಿಯಾದ ಸನ್ನಿವೇಶಗಳು ದಶಕದ ಪ್ರಮುಖ ಬಿಕ್ಕಟ್ಟುಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು.

ದೇಶದ ನಾಗರಿಕರು ವಿದೇಶಗಳಿಂದ ಬರುವ ಉತ್ಪನ್ನಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವಂತೆ ಮತ್ತೆ ಕರೆ ನೀಡಿದ ಪ್ರಧಾನಿ ಮೋದಿ, 'ವೋಕಲ್ ಫಾರ್ ಲೋಕಲ್' ಮಂತ್ರ ಅನುಸರಿಸಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್‌ ಬೆಟ್ಟಿಂಗ್‌ಗಾಗಿ ಕೈತುಂಬ ಸಾಲ, ಯುವಕ ನೇಣಿಗೆ ಶರಣು